ಮತದಾನ ಜಾಗೃತಿ ಜಾಥಾ ಚಾಲನೆ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ

Screenshot_2024-04-03-22-43-54-00.jpg
Published on

ಬೆಳಗಾವಿ: ನಗರದಲ್ಲಿ ಬುಧವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರು ಹಾಗೂ ಮಾಜಿ ದೇವದಾಸಿಯರಿಂದ ಮತದಾನದ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. 

ಈ ವೇಳೆ ನಗರದ ಚನ್ನಮ್ಮ ವೃತ್ತದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಲಿಂಗತ್ವ ಅಲ್ಪ ಸಂಖ್ಯಾತರು ಕೂಡಾ ಮತದಾನದಿಂದ ದೂರುಳಿಯದೇ ಮತದಾನದಲ್ಲಿ ಭಾಗಿಯಾಗಬೇಕು. ಪ್ರಜಾಪ್ರಭುತ್ವ ಹಬ್ಬವಾಗಿ ಚುನಾವಣೆಯಲ್ಲಿ ನಿಮ್ಮ ನಾಯಕನನ್ನು ಆಯ್ಕೆ ಮಾಡಲು ತಪ್ಪದೇ ಮತದಾನ ಮಾಡಬೇಕು. ನಗರ ಪ್ರದೇಶದಲ್ಲಿ ಕಡಿಮೆ ಮತದಾನವಾಗುತ್ತಿದೆ. ಪ್ರಜ್ಞಾವಂತರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ತಿಳಿಸಿದರು. 

ಜಾಗೃತಿ ಜಾಥಾ: ನಗರದ ಚನ್ನಮ್ಮ ವೃತ್ತದಲ್ಲಿ ಪ್ರಾರಂಭವಾದ ಮತದಾನದ ಜಾಗೃತಿ ಜಾಥಾವೂ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನ ವನದ ರಸ್ತೆಯ ಮೂಲಕ ಕೃಷ್ಣದೇವರಾಯ ವೃತ್ತದಿಂದ ಮಹಾನಗರ ಪಾಲಿಕೆವರೆಗೆ ಜಾಥಾ ನಡೆಯಿತು. ಸುಮಾರು ಮೂನ್ನುರಕ್ಕು ಹೆಚ್ಚು ಜನರಿಂದ ಜಾಥಾ ಉದ್ದಕ್ಕೂ ಮತದಾನದ ಘೊಷಣೆ ಕೂಗುವುದು, ಜಾಗೃತಿ ಫಲಕಗಳ ಮೂಲಕ ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಿದರು.

ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಪಂ ಯೋಜನಾ ನಿರ್ದೇಶಕ ಡಾ: ಎಂ. ಕೃಷ್ಣರಾಜು, ಲೆಕ್ಕಾಧಿಕಾರಿ ಗಂಗಾ ಹಿರೆಮಠ, ಪಾಲಿಕೆ ಆಯುಕ್ತ ಲೊಕೇಶ ಪಿ.ಎನ್., ಆರ್. ನಾಗರಾಜ್, ಬಿ. ಶ್ರೀನಿವಾಸ, ನಗರ ಸಿಡಿಪಿಒ ರಾಮಮುರ್ತಿ ಕೆ.ವಿ , ಗ್ರಾಮೀಣ ಸಿ.ಡಿ.ಪಿ.ಓ ಸುಮಿತ್ರಾ ಡಿ.ಬಿ., ಮಹಿಳಾ ಅಭಿವೃದ್ಧಿ ನಿಗಮ ನಿರಿಕ್ಷಕಿ ರೂಪಾ ಪವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net