ಬಿಜೆಪಿಯಿಂದ ವಿಶ್ವ ಪರಿಸರ ದಿನಾಚರಣೆ

1.npk-1.
ಪೆರಾಜೆ ಶಕ್ತಿ ಕೇಂದ್ರದಲ್ಲಿ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ವಿಶ್ವ ಪರಿಸರ ದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.
Published on

ನಾಪೋಕ್ಲು: ಪೆರಾಜೆ ಶಕ್ತಿ ಕೇಂದ್ರದಲ್ಲಿ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ವಿಶ್ವ ಪರಿಸರ ದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬಿಜೆಪಿ ಶಕ್ತಿ ಕೇಂದ್ರ ಪೆರಾಜೆ ವತಿಯಿಂದ ಮಂಗಳವಾರ ದೇವಸ್ಥಾನದ ಉಳ್ಳಾಕುಲ ಸ್ಥಾನದ ಪರಿಸರದಲ್ಲಿ ಸಾಗುವಾನಿ, ಮಹಾಗನಿ, ಬಿಲ್ವಪತ್ರೆ ಗಿಡ ನಾಟಿ ಮಾಡಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಆಡಳಿತ ಮುಖ್ಯಸ್ಥ ಜಿತೇಂದ್ರ ನಿಡ್ಯಮಲೆ, ಗ್ರಾಮಾಂತರ ಮಂಡಲದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net