

ಹುಬ್ಬಳ್ಳಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವವದ ಸರ್ಕಾರ ಜಿಎಸ್‌ಟಿ ಸ್ಲಾೃಬ್ ಇಳಿಕೆ ಮಾಡಿದ್ದರ ಹಿನ್ನೆಲೆಯಲ್ಲಿ ಇಲ್ಲಿಯ ಕೇಶ್ವಾಪುರದ ಬಸವೇಶ್ವರ ವೃತ್ತದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ವತಿಯಿಂದ ಸೋಮವಾರ ವಿಜಯೋತ್ಸವ ಆಚರಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆ. 15ರಂದು ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುವಾಗ ದೇಶದ ಜನರಿಗೆ ಒಳ್ಳೆಯ ಸುದ್ದಿ ನೀಡುವುದಾಗಿ ಹೇಳಿದ್ದರು. ಅವರು ಮಾತಿನಂತೆಯೇ ನಡೆದುಕೊಂಡಿದ್ದಾರೆ. ನವರಾತ್ರಿ ಉತ್ಸವಕ್ಕೆ ಜಿಎಸ್‌ಟಿ ಸ್ಲಾೃಬ್ ಇಳಿಸುವ ಮೂಲಕ ಬಡವರು ಮತ್ತು ಮಧ್ಯಮ ವರ್ಗದವರ ಹಿತ ಕಾಪಾಡಿದ್ದಾರೆ. ದೇಶದಲ್ಲಿ ಜೀವ ರಕ್ಷಕ ಔಷಧಗಳಿಗೆ ಜಿಎಸ್‌ಟಿ ಶೂನ್ಯಗೊಳಿಸಲಾಗಿದೆ. ಅದರಂತೆ ನಿತ್ಯ ಬಳಕೆಯ ವಸ್ತುಗಳನ್ನೂ ಜಿಎಸ್‌ಟಿ ದರವನ್ನೂ ಇಳೀಸಿದ್ದಾರೆ. ಆದರೆ, ರಾಜ್ಯದ ಸಿದ್ದರಾಮಯ್ಯ ಸರ್ಕಾರ, ಬಡವರು ಮತ್ತು ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕುತ್ತಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಬೀರಪ್ಪ ಖಂಡೇಕರ, ಉಮಾ ಮುಕುಂದ ಮಾತನಾಡಿದರು.
ಪಟಾಕಿ ಸಿಡಿಸಿ, ಸಿಹಿ ಹಂಚಿ ಕೇಂದ್ರದ ಮೋದಿ ಸರ್ಕಾರಕ್ಕೆ ಜೈಕಾರ ಹಾಕಲಾಯಿತು.
ಪ್ರಮುಖರಾದ ವಸಂತ ನಾಡಜೋಶಿ, ಸಿದ್ದು ಮೊಗಲಿಶೆಟ್ಟರ್, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ಈಶ್ವರಗೌಡ ಪಾಟೀಲ, ರಾಮನಗೌಡ ಶೆಟ್ಟನಗೌಡರ, ಮಣಿಕಂಠ ಶಾಗೋಟಿ, ಪ್ರವೀಣ ಹುರುಳಿ, ಪ್ರಶಾಂತ ಹಾವಣಗಿ, ಮಂಜುನಾಥ ಕೊಂಡಪಲ್ಲಿ, ಮಂಜುನಾಥ ಊಟವಾಲೆ, ಮುತ್ತು ಹೆಬ್ಬಳ್ಳಿ, ವಿನೋದ ರೇವಣಕರ, ಅಕ್ಕಮಹಾದೇವಿ ಹೆಗಡೆ, ವಿಜಯಲಕ್ಷ್ಮೀ ತಿಮ್ಮೊಲಿ, ವಿಜಯಾ ಗುಡಗೇರಿ ಇತರರು ಭಾಗವಹಿಸಿದ್ದರು.