

ಮೈಸೂರು: ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು.
ಮೇಯರ್ ಶಿವಕುಮಾರ್ ಮಾತನಾಡಿ, ದಾಸರ ಪದಗಳು ಹಾಗೂ ಸಾಹಿತ್ಯದ ಮೂಲಕ ವಿಶ್ವಕ್ಕೆ ಮಾದರಿಯಾದವರು ಕನಕದಾಸರು. ಕರ್ನಾಟಕದಲ್ಲಿ ಕನಕದಾಸರಿಗೆ ಸರ್ಕಾರಿ ಗೌರವ ಕೊಟ್ಟಿದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ. ಇಂತಹ ಮಹಾನ್ ಪುರುಷರ ಹೆಸರಿನಲ್ಲಿ ಪ್ರಾಧಿಕಾರ ರಚನೆ ಮಾಡಿ ಅವರ ಸಾಹಿತ್ಯ ಭಂಡಾರವನ್ನು ಹಾಗೂ ಅವರ ತತ್ವ ಸಿದ್ಧಾಂತವನ್ನು ಸಾರ್ವಜನಿಕರಿಗೆ ತಿಳಿಸುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.
ಉಪ ಮೇಯರ್ ಡಾ.ರೂಪಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬಣ್ಣ, ನಗರ ಪಾಲಿಕೆ ಸದಸ್ಯ ಜಗದೀಶ್, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ಬಿ.ಎಂ.ರಘು, ಚಿಕ್ಕಮ್ಮ ಬಸವರಾಜ್, ಕಮಲಮ್ಮ, ಪೂರ್ಣಿಮಾ, ಹೇಮಾ ಗಂಗಪ್ಪ, ಪ್ರಧಾನ ಕಾರ್ಯದರ್ಶಿ ಗೋಪಾಲ್ ಇತರರಿದ್ದರು.