ಸೂರಜ್​ ಫಿರ್​ ನಿಕಲೆಗಾ: ಸಿ.ಸಿ. ಪಾಟೀಲ

20231012_160812
Published on

ಗದಗ:
ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್​ ಸೇರ್ಪಡೆ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಮಿರ್ಕವಾಗಿಯೇ ಮಾತನಾಡಿದ ಮಾಜಿ ಸಚಿವ ಸಿ.ಸಿ. ಪಾಟೀಲ, "ಈ ಹಿಂದಿನ ಲೋಕಸಭಾ ಚುನಾವಣೆಯೊಂದರಲ್ಲಿ ಅಟಲ್​ ಜೀ ಮತ್ತು ಅಡ್ವಾಣಿ ಅವರು ಇಬ್ಬರೇ ಗೆಲುವು ಸಾಧಿಸಿದ್ದರು. ಬಿಜೆಪಿ ಫಲಿತಾಂಶದಿಂದ ನೋವಾಗಿ ಅಟಲ್​ ಜೀ ಅವರು, ನಡೀರಿ ಫಿಲ್ಮ ನೋಡಿಕೊಂಡು ಬರೋಣ ಎಂದು ಅಡ್ವಾಣಿ ಅವರನ್ನು ಕರೆದುಕೊಂಡು ಹೋಗಿದ್ದರು. ಅಂದು ಅವರು ನೋಡಿದ್ದ ಚಲನಚಿತ್ರದ ಹೆಸರು "ಸೂರಜ್​ ಫಿರ್​ ನಿಕಲೆಗಾ'….. ಅಂದು ಎರಡೇ ಸ್ಥಾನ ಜಯಸಿದ್ದ ಬಿಜೆಪಿ ಪಕ್ಷ ಇಂದು 300 ಸ್ಥಾನದ ಗಡಿ ದಾಟಿದೆ. ಸೂರ್ಯ ಮತ್ತೇ ಉದಯಿಸುತ್ತಾನೆ. ಕಾಂಗ್ರೆಸ್​ ತೆಕ್ಕೆಗೆ ನಮ್ಮ ಪಕ್ಷದವರು ಹೋಗಿದ್ದಾರೆ ಎಂದ ಮಾತ್ರಕ್ಕೆ ಪಕ್ಷ ಕುಗ್ಗಿದಂತಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಾಳಯದಲ್ಲೇ ಸೂರ್ಯ ಉದಯಿಸುತ್ತಾನೆ ಎಂದು ನಗೆ ಬೀರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net