ಎಂ. ಕೃಷ್ಣಪ್ಪ ಮಂತ್ರಿಯಾಗುತ್ತಾರೆ; ಬಿಜೆಪಿ ಯುವ ಮುಖಂಡ ಸುಪ್ರೀತ್​ ಭವಿಷ್ಯ

BJP
Published on

ಬೆಂಗಳೂರು ದಕ್ಷಿಣ: ವಿಧಾನಸಭಾ ಕ್ಷೇತ್ರದ ದೊಡ್ಡತೋಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ಪರ ಮತಯಾಚನೆ ಮಾಡಲಾಯಿತು.

ಬಿಜೆಪಿ ಕಾರ್ಯಕರ್ತರ ಪಕ್ಷ

ಬಿಜೆಪಿ ಯುವ ಮುಖಂಡ ಸುಪ್ರೀತ್​ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು ಪ್ರಾಬಲ್ಯ ಹೊಂದಿದೆ. ಎಲ್ಲ ಬೂತ್​ಗಳಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣಪ್ಪ ಪರ ಮತಯಾಚಿಸಲಾಗುತ್ತಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಕಾಯಕದಲ್ಲಿ ನಿರತರಾಗಿದ್ದೇವೆ ಎಂದರು.

ಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ

ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್​ ರೆಡ್ಡಿ ಮಾತನಾಡಿ, ಕ್ಷೇತ್ರದ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಮತಯಾಚನೆ ವೇಳೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಮತ್ತೊಮ್ಮೆ ಕೃಷ್ಣಪ್ಪ ಅವರು ಜಯದ ನಗೆ ಬೀರಿ ಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಸ್ಥಳಿಯ ಮುಖಂಡರಾದ ರವಿ ರೆಡ್ಡಿ, ಅಂಬರೀಶ್​ ರೆಡ್ಡಿ, ಅರ್ಜುನ್​, ಅಪ್ಪಯ್ಯ, ಮಹೇಶ್​, ರವಿ, ಗುರುಮೂರ್ತಿ ರೆಡ್ಡಿ, ಶ್ರೀನಿವಾಸ್​ ಸ್ಥಳಿಯ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net