ಬಿಜೆಪಿ ಅಭ್ಯರ್ಥಿ ಕೆ.ಕರಿಯಪ್ಪ ಗೆಲುವಿಗೆ ಒಗ್ಗೂಡಿ ಶ್ರಮಿಸೋಣ

Hanumagouda Belagurki
ಹನುಮನಗೌಡ ಬೆಳಗುರ್ಕಿ
Published on

ಸಿಂಧನೂರು: ಬಿಜೆಪಿ ಅಭ್ಯರ್ಥಿ ಕೆ.ಕರಿಯಪ್ಪ ಗೆಲುವಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.

ಮತಗಳಿಕೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ

ನಗರದ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊಂತನೂರು ಕುಟುಂಬಕ್ಕೆ ತನ್ನದೇಯಾದ ಪ್ರಭಾವವಿದೆ. ಕೆ.ಕರಿಯಪ್ಪನವರು ಗೆಲ್ಲುವುದು ಖಚಿತವಾಗಿದ್ದು, ಮತಗಳಿಕೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು.

ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡರು ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದವರಿಗೆ ಮತದಾರರು ಮತ ನೀಡಿ, ಅಭಿವೃದ್ದಿಗೆ ಅವಕಾಶ ಕಲ್ಪಿಸಬೇಕು ಎಂದರು.

ಬೆಳೆಗಳ ರಕ್ಷಣೆ ಹಾಗೂ ಬೆಳೆಗಳಿಗೆ ಉತ್ತಮ ಬೆಲೆ ನೀಡುವಲ್ಲಿ ಬಿಜೆಪಿ ಸರಕಾರ ರೈತಪರವಾದ ಕಾರ್ಯವನ್ನು ಮಾಡಿದೆ. ರೈತರಿಗೆ ಬಡ್ಡಿ ರಹಿತವಾಗಿ 5 ಲಕ್ಷ ಸಾಲವನ್ನು ಬಿಜೆಪಿ ಸರ್ಕಾರ ನೀಡಿರುವುದರಿಂದ ರೈತರೆಲ್ಲರೂ ಬಿಜೆಪಿಗೆ ಮತ ನೀಡಬೇಕು ಎಂದು ತಿಳಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ಹನುಮೇಶ ಸಾಲಗುಂದಾ, ನಗರ ಘಟಕ ಅಧ್ಯಕ್ಷ ನಿರುಪಾದಿ ಸಾಸಲಮರಿ, ಚುನಾವಣಾ ಉಸ್ತುವಾರಿ ನರಸಿಂಹರಾವ್ ಕುಲಕರ್ಣಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net