ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಗೆಲುವು ಖಚಿತ

BJP candidate Gaddigowdar's victory is sure
ತೇರದಾಳ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಪುತ್ಥಳಿಗೆ ಕೊಳ್ಳೆಗಾಲ ಶಾಸಕ ಎನ್. ಮಹೇಶ ಮಾಲಾರ್ಪಣೆ ಮಾಡಿದರು. ಪ್ರಕಾಶ ಕಾಳೆ, ರಮೇಶ ಧರೆನ್ನವರ, ರಾವಸಾಬ ಗುಬಚಿ ಇತರರಿದ್ದರು.
Published on

ತೇರದಾಳ: ಜಿಲ್ಲೆಯಲ್ಲಿ ಬಿಜೆಪಿ ವರ್ಚಸ್ಸು, ಅದರಲ್ಲೂ ತೇರದಾಳ ಕ್ಷೇತ್ರದಲ್ಲಿ ಶಾಸಕ ಸಿದ್ದು ಸವದಿ ಅವರು ಕ್ರಿಯಾಶೀಲರಾಗಿದ್ದರಿಂದಾಗಿ ಅತಿ ಹೆಚ್ಚು ಮತಗಳ ಅಂತರದಲ್ಲಿ ಪಿ.ಸಿ. ಗದ್ದಿಗೌಡರ ಗೆಲುವು ಸಾಧಿಸಲಿದ್ದಾರೆ ಎಂದು ಕೊಳ್ಳೆಗಾಲ ಮಾಜಿ ಶಾಸಕ ಎನ್. ಮಹೇಶ ಹೇಳಿದರು.

ಪಟ್ಟಣಕ್ಕೆ ಬುಧವಾರ ಸಂಜೆ ಭೇಟಿ ನೀಡಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಪ್ರಕಾಶ ಕಾಳೆ, ರಮೇಶ ಧರೆನ್ನವರ, ಸಚಿನ್ ಕೊಡತೆ, ಕಾಶೀನಾಥ ರಾಠೋಡ, ಜಿನ್ನಪ್ಪ ದೊಡಮನಿ, ನಾಗಪ್ಪ ದೊಡಮನಿ, ತಾಪಂ ಮಾಜಿ ಅಧ್ಯಕ್ಷ ರಾವಸಾಬ ಗುಬಚಿ, ಮಂಜು ಸರಿಕರ, ಭೂಪಾಲ ವಾಜಂತ್ರಿ, ವಿಜಯ ವಾಜಂತ್ರಿ ಇತರರಿದ್ದರು.

ತಾಲೂಕಿನ ಹನಗಂಡಿ, ಸಸಾಲಟ್ಟಿ, ಹಳಿಂಗಳಿ, ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ದಲಿತ ಸಮುದಾಯದೊಂದಿಗೆ ಚರ್ಚಿಸಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net