

ಶೃಂಗೇರಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಉಡುಪಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರ ಗೆಲುವಿಗಾಗಿ ಆಶಿಸಿ ಪಕ್ಷದ ಎಸ್ಸಿ ಮೋರ್ಚಾ ರಾಜ್ಯ ವಕ್ತಾರ ಬಿ.ಶಿವಶಂಕರ್ ಪಟ್ಟಣದ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 56ನೇ ಬಾರಿ ರಕ್ತದಾನ ಮಾಡಿದರು.
ಜತೆಗೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ವೇಣುಗೋಪಾಲ್ ಕೂಡಾ ರಕ್ತದಾನ ಮಾಡಿದರು. ಬಿ.ಶಿವಶಂಕರ್ ಅವರಿಗೆ ಡಾ. ಲಕ್ಷ್ಮೀನಾರಾಯಣ್ ರಕ್ತದಾನದ ಪ್ರಮಾಣಪತ್ರ ವಿತರಿಸಿದರು.