

ಮಡಿಕೇರಿ:
ಪಕ್ಷದ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಅವರಿಗೆ ಮೂರು ಬಾರಿ ಎಂ.ಎಲ್.ಎ ಸೀಟ್ ಕೊಟ್ಟಿರುವುದು ಬಿಜೆಪಿ ಎನ್ನುವುದು ಅವರಿಗೆ ಗೊತ್ತಿದೆಯಾ? ಎಂದು ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧನಂಜರ್ ಸರ್ಜಿ ಪ್ರಶ್ನಿಸಿದ್ದಾರೆ. ರಘುಪತಿ ಭಟ್ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಬಗೆ ನಮಗೆ ಬಹಳ ಗೌರವವಿದೆ. ಭಾರತೀಯ ಜನತಾ ಪಾರ್ಟಿಗೆ ಇರುವುದು ಒಬ್ಬರೇ ಅಭ್ಯರ್ಥಿ. ಸೂಕ್ತ ಅಭ್ಯರ್ಥಿಯನ್ನು ಸಂಘಟನೆಯ ಹಿರಿಯರು ಸೂಚಿಸಿದ್ದಾರೆ. ಸಾಮಾಜಿಕ, ಅರೋಗ್ಯ ಕ್ಷೇತ್ರದಲ್ಲಿ ದುಡಿದ ಒಳ್ಳೆಯ ಅಭ್ಯರ್ಥಿಯನ್ನ ನಿಲ್ಲಿಸಿದ್ದಾರೆ. ಧನಂಜಯ ಸರ್ಜಿ ಬಿಜೆಪಿಗೆ ಹೊಸಬನಲ್ಲ. ೧೦ನೇ ವಯಸ್ಸಿನಿಂದಲೇ ಸ್ವಯಂ ಸೇವಕ. ಈಗಲೂ ಸ್ವಯಂ ಸೇವಕ, ನನ್ನ ಜೀವ ಇರುವ ತನಕ ನಾನು ಸ್ವಯಂ ಸೇವಕ ಎಂದು ಮಡಿಕೇರಿ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಬಲದಿಂದ ನಿಂತಿದೆ. ಪಕ್ಷದ ಹಿರಿಯರ ತೀರ್ಮಾನ ಅಂತಿಮ. ಅದರಂತೆ ಚುನಾವಣಾ ಕೆಲಸ ಆಗುತ್ತದೆ. ನಾನು ಕಾಂಗ್ರೆಸ್‌ನಿಂದ ಬಂದಿದ್ದೇನೆ ಎಂದು ರಘುಪತಿ ಭಟ್ ಹೇಳುತ್ತಾರೆ. ಆದರೆ ಬಿಜೆಪಿಗೆ ಬರುವ ಮೊದಲು ಸಂಘಟನೆಯಲ್ಲಿ ಇದ್ದೆ. ಕಾಂಗ್ರೆಸ್‌ನಿಂದ ಟಿಕೇಟ್ ನೀಡುತ್ತೇವೆ ಎಂದು ಬಹಳ ಒತ್ತಡ ಇತ್ತು. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಯಾವುದಕ್ಕೂ ಮಣಿಯದೆ ಬಿಜೆಪಿಯಲ್ಲಿ ಇದ್ದೇನೆ. ನನ್ನ ಬಗ್ಗೆ ಹೇಳಲು ಬೇರೆ ಏನು ಇಲ್ಲ. ಹೀಗಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಹರ್ಷ ಕೊಲೆ ಪ್ರಕರಣದಲ್ಲಿ ತಾನು ಸೌಹಾರ್ದ ಸಭೆ ನಡೆಸಿದ್ದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಧನಂಜಯ್ ಸರ್ಜಿ, ಹರ್ಷ ಕೊಲೆ ಪ್ರಕರಣದಲ್ಲಿ ಗೊಂದಲದಿಂದ ವ್ಯಾಪಾರ ಸ್ಥಗಿತವಾಗಿತ್ತು. ಹೀಗಾಗಿ ಶಾಂತಿಗಾಗಿ ಮೆರವಣಿಗೆ ಜವಾಬ್ದಾರಿ ಹೊತ್ತಿದೆ ಅಷ್ಟೇ. ಇದರಲ್ಲಿ ಸಾಧು ಸಂತರು, ನ್ಯಾಯಾಧೀಶರು ಭಾಗಿಯಾಗಿದ್ದರು. ಒಬ್ಬ ವೈದ್ಯನಾಗಿ ಆ ವಿಚಾರದಲ್ಲಿ ಭಾಗಿಯಾಗಿದ್ದೆ. ಆದರೆ ಇದನ್ನೇ ನಾನು ಹಿಂದು ವಿರೋಧಿ ಎಂದು ಹೇಳುವುದು ಸರಿಯಲ್ಲ. ಧನಜಂಜಯ್ ಸರ್ಜಿಯ ಸೇವೆ ಏನೆಂಬುದು ಕ್ಷೇತದ ಜನತೆಗೆ ಗೊತ್ತಿದೆ. ಅವರಿಗೆ ಉತ್ತರವನ್ನು ಚುನಾವಣೆ ಮೂಲಕ ನೀಡಲಾಗುವುದು ಎಂದು ಹೇಳಿದರು.
ನೈಋತ್ಯ ಪದವೀಧರರ ಕ್ಷೇತ್ರ ಐದೂವರೆ ಜಿಲ್ಲೆಗಳನ್ನು ಹೊಂದಿದೆ. ಇಲ್ಲಿ ೧೪ ಮೆಡಿಕಲ್ ಕಾಲೇಜು, ೩೦ ಇಂಜಿನಿಯರಿಂಗ್ ಕಾಲೇಜು, ೧೦೦ ಕ್ಕಿಂತ ಹೆಚ್ಚು ದೊಡ್ಡ ದೊಡ್ಡ ವಿದ್ಯಾಸಂಸ್ಥೆಯನ್ನ ಹೊಂದಿರುವ ಕ್ಷೇತ್ರ. ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಎಂಲ್‌ಸಿ ಸುಜಾಕುಶಾಲಪ್ಪ, ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ರೈತ ಮೋರ್ಚಾ ಕಾರ್ಯದರ್ಶಿ ಡಾ. ನವೀನ್, ಜಿಲ್ಲಾ ಉಪಾಧ್ಯಕ್ಷ ಮಹೇಶ್ ಜೈನಿ, ವಕ್ತಾರ ಸುಬ್ರಹ್ಮಣ್ಯ ಉಪಾಧ್ಯ ಇದ್ದರು.