ಮಯೂರಿ ಗಾರ್ಡನ್​ನಲ್ಲಿ ಬಿಜೆಪಿ ಪ್ರಚಾರ ಸಭೆ

New Mahesh New New
Published on

ಹುಬ್ಬಳ್ಳಿ : ಲೋಕಸಭಾ ಚುನಾವಣೆ ಅಂಗವಾಗಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.52 ರ ಮಯೂರಿ ಗಾರ್ಡನ್​ನಲ್ಲಿ ಶುಕ್ರವಾರದಂದು ಬಿಜೆಪಿ ಪ್ರಚಾರ ಸಭೆ ಆಯೋಜಿಸಲಾಗಿತ್ತು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಧಾರವಾಡ ಲೋಕಸಭೆ ಕ್ಷೇತ್ರದ ಸಂಸದ ಪ್ರಲ್ಹಾದ ಜೋಶಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಈ ಬಾರಿಯೂ ದಾಖಲೆ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಬಿಜೆಪಿಗೆ ಮತ ಹಾಕಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಬಿಜೆಪಿ ಪ್ರಮುಖರಾದ ಪ್ರಕಾಶ ಕ್ಯಾರಕಟ್ಟಿ, ಡಾ. ಪ್ರಕಾಶ ಯಳವತ್ತಿ, ರಾಮಚಂದ್ರ ಗರಗ, ಎಸ್. ಟಿ. ಅಕ್ಕಿ, ರಮೇಶ ಉಳ್ಳಾಗಡ್ಡಿ, ಉಮೇಶ ದುಶಿ, ಗಿರೀಶ ಚವರಗಿ, ರಾಜು ಕಾಳೆ, ಹರೀಶ ಜಂಗ್ಲಿ, ಕಿಶನ ಬಿಲಾನಾ, ಗೀತಾ ಬದ್ದಿ, ಅಕ್ಷಯ ಬದ್ದಿ, ಕಾಂಚನಾ ಸಿಂದೋಗಿ, ಮಂಜುನಾಥ ಮುದ್ದಿ, ವಿವೇಕಾನಂದ ಪವಾರ, ಈಶ್ವರ ನಾಯ್ಕರ, ನಾಗರಾಜ ಕುಲಕರ್ಣಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net