

ಧಾರವಾಡ: ದೇಶದ ಅಭಿವೃದ್ಧಿ ಮತ್ತು ಬಲಿಷ್ಠಗೊಳಿಸಲು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು. ಅದಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.
ಹು- ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜೋಗೆಲ್ಲಾಪುರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಶುಕ್ರವಾರ ಮತಯಾಚಿಸಿ ಅವರು ಮಾತನಾಡಿದರು.
ಜಗತ್ತನ್ನು ಕಾಡಿದ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಎಲ್ಲ ಭಾರತೀಯರಿಗೂ ಲಸಿಕೆ ನೀಡುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡಿದರು. ಅಗತ್ಯವಿರುವ ದೇಶಗಳಿಗೂ ಲಸಿಕೆ ಕೊಡಲಾಯಿತು. ದೇಶದಲ್ಲಿ ಇಂದು ಪ್ರತಿದಿನ ನೂರಾರು ಕಿಲೋಮೀಟರ್ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರೈಲು, ವಿಮಾನ ನಿಲ್ದಾಣಗಳನ್ನು ದಾಖಲೆ ರೀತಿಯಲ್ಲಿ ಸುಧಾರಣೆ ಮಾಡಲಾಯಿತು. ಪ್ರಧಾನಿ ಮೋದಿಯವರ ಸಂಪುಟದಲ್ಲಿ ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಪ್ರಲ್ಹಾದ ಜೋಶಿ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಮಾಜಿ ಮೇಯರ್ ಮಂಜುಳಾ ಅಕ್ಕೂರ, ಪಾಲಿಕೆ ಸದಸ್ಯೆ ಲಕ್ಷಿ÷್ಮÃ ಹಿಂಡಸಗೇರಿ, ಮುಖಂಡರಾದ ದುರ್ಗಪ್ಪ ಜೋಗಣ್ಣವರ, ಬಸವನಗೌಡ ಪಾಟೀಲ, ಫಕ್ಕೀರಪ್ಪ ವಾಲೀಕಾರ, ಮಾರುತಿ ಹಿಂಡಸಗೇರಿ, ಇತರರಿದ್ದರು.