ಹುಬ್ಬಳ್ಳಿ: ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವೀರ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಶನಿವಾರ ಲೋಕಸಭಾ ಚುನಾವಣೆ ಅಂಗವಾಗಿ ಬಿಜೆಪಿ ಪರ ಪ್ರಚಾರ ಕೈಗೊಂಡರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅವಿರತವಾಗಿ ಶ್ರಮಿಸುತ್ತಿರುವ ಕಾರಣದಿಂದಾಗಿ ವಿಶ್ವ ಮಟ್ಟದಲ್ಲಿ ಭಾರತಕ್ಕೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಈ ಬಾರಿಯೂ ಬಿಜೆಪಿ ಅಭ್ಯಥಿರ್ ಪ್ರಲ್ಹಾದ ಜೋಶಿ ಅವರನ್ನು ಬೆಂಬಲಿಸಬೇಕು. ಸತತ ಐದನೇ ಬಾರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ನಾವೆಲ್ಲರೂ ಬಹುಮತದಿಂದ ಅವರನ್ನು ಆಯ್ಕೆ ಮಾಡಬೇಕಿದೆ. ಆ ಮೂಲಕ ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕು ಎಂದರು.
ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರು, ಪ್ರಮುಖರಾದ ಉಳವಪ್ಪ ಪಿರಣ್ಣವರ, ಆರ್.ಬಿ. ಕುಲಕಣಿರ್, ಮುತ್ತು ಹೆಬ್ಬಳ್ಳಿ, ಶಂಕರ ಪಾಟೀಲ, ಎಸ್.ಎ. ಲಕ್ಷ್ಮೇಶ್ವರ, ಸುರೇಶ ರೇವಡ, ವೆಂಕಟೇಶ ಪಾಟೀಲ, ಸಿ.ಎಸ್. ಹವಾಲ್ದಾರ, ಎನ್.ಆರ್. ಹಬೀಬ, ರಾಜು ಬಿಜಾಪುರ, ಕೃಷ್ಣ ಶೆಟ್ಟಿ, ಪಂಡಿತ ಹಾಲೊರ, ರಮಾನಂದ ಶೆಟ್ಟಿ, ಆರ್. ಶಿವಣ್ಣ, ಕೆ.ಆರ್. ವಾಳ್ವೇಕರ, ವೆಂಕಟೇಶ ಪಾಟೀಲ, ನಂದೀಶ ಗುಂಡೂರು, ಅಭಿಷೇಕ ನಾಯಕ, ವಿಜಯ ಶೆಟ್ಟಿ ಇತರರು ಉಪಸ್ಥಿತರಿದ್ದರು.