ಬಿಜೆಪಿ ಪರ ಕ್ರಾಂತಿಕಿರಣ ಬಿರುಸಿನ ಪ್ರಚಾರ

IMG-20240503-WA0009-2.jpg
Published on

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರ ಪರವಾಗಿ ಡಾ. ಕ್ರಾಂತಿಕಿರಣ ಅವರು ನಗರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.

ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 75ರ ನೇಕಾರನಗರ ಮಹಾಲಕ್ಷ್ಮಿ ಕಾಲನಿಯಲ್ಲಿ ಮನೆ ಮನೆಗೆ ತೆರಳಿದ ಡಾ. ಕ್ರಾಂತಿಕಿರಣ ಅವರು ಕೇಂದ್ರ ಸಚಿವರ ಸಾಧನೆಗಳನ್ನು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯಿಂದಾಗಿ ಪ್ರಸ್ತುತ ಭಾರತ ವಿಶ್ವದಲ್ಲೇ 5ನೇ ಪ್ರಬಲ ಆಥಿರ್ಕ ಶಕ್ತಿಯಾಗಿ ಹೊರಹೊಮ್ಮಿದೆ. ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಬರಲಿದೆ ಎಂದರು.

ಕೇಂದ್ರ ಸಚಿವ ಜೋಶಿ ಅವರು ತಮ್ಮ ಅಧಿಕಾರವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ವಿದ್ಯಾಕಾಶಿ ಧಾರವಾಡವನ್ನು ಹೆಸರಿಗೆ ತಕ್ಕಂತೆ ಶೈಕ್ಷಣಿಕ ಕೇಂದ್ರವಾಗಿ ಮಾರ್ಪಡಿಸಿದ್ದಾರೆ. ಜಿಲ್ಲೆಯ ಮತ್ತಷ್ಟು ಪ್ರಗತಿಗಾಗಿ ಬಿಜೆಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪಾಲಿಕೆ ಮಾಜಿ ಸದಸ್ಯ ಮಂಜುನಾಥ ಚಿಂತಗಿಂಜಲ, ಮುಖಂಡರಾದ ಶ್ರೀನಿವಾಸ ತಾತುಸ್ಕರ, ವಾಸುದೇವ ಬದ್ದಿ, ಕಾಶೀನಾಥ ಭಂಡಾರಿ, ಶಂಕರ ವಜ್ರಬಂಡಿ, ಗುರುನಾಥ ತಡಸಿ, ಸಿದ್ರಾಮಪ್ಪಾ ಹುರಕಡ್ಲಿ, ರಾಮಲಿಂಗ ಸೇಲಂ, ಮಂಜುನಾಥ ತೇರದಾಳ, ರವಿ ಸೋಳಂಕಿ, ರಾಮು ಮಿಸ್ಕಿನ, ನಾಗರತ್ನಾ ಕಲಾಲ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net