ಯುವ ಜನಾಂಗಕ್ಕೆ ಅಮೃತ ಕಾಲ ವೈಭವದ ಅನುಭವ- ಬಿಜೆಪಿ ಆರ್ಥಿಕ ಪ್ರಕೋಷ್ಠ ಕಾರ್ಯಾಗಾರದಲ್ಲಿ ಕ್ಯಾ.ಬ್ರಿಜೇಶ್ ಚೌಟ ವಿಶ್ವಾಸ

mng- feb 11- Budget workshop
ಮಂಗಳೂರು ಎಸ್‌ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ‘2024-25 ರ ಮಧ್ಯಂತರ ಬಜೆಟ್ ಮತ್ತು ಭಾರತದ ಆರ್ಥಿಕತೆ’ ವಿಷಯದಲ್ಲಿ ಬಿಜೆಪಿ ದಕ ಜಿಲ್ಲಾ ಆರ್ಥಿಕ ಪ್ರಕೋಷ್ಠದ ವತಿಯಿಂದ ಜರುಗಿದ ಕಾರ್ಯಗಾರವನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಿದರು. ಬಿಜೆಪಿ ದಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಲೆಕ್ಕಪರಿಶೋಧಕರಾದ ಶಾಂತರಾಮ ಶೆಟ್ಟಿ, ಎಸ್‌ಎಸ್ ನಾಯಕ್, ಎಸ್‌ಡಿಎಮ್ ಪಿಜಿ ಸೆಂಟರ್‌ನ ನಿರ್ದೇಶಕಿ ಡಾ. ಸೀಮಾ ಶೆಣೈ, ಪ್ರಕೋಷ್ಠದ ಸದಸ್ಯರಾದ ಸಿಎ ಶ್ರೀಕೃಷ್ಣ ಹಾಗೂ ಚಿದಾನಂದ ಉಚ್ಚಿಲ್, ಪ್ರೊ.ರಮ್ಯಾ ಶೆಟ್ಟಿ ಉಪಸ್ಥಿತರಿದ್ದರು.
Published on

ಮಂಗಳೂರು: ಎಸ್‌ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ‘2024-25 ರ ಮಧ್ಯಂತರ ಬಜೆಟ್ ಮತ್ತು ಭಾರತದ ಆರ್ಥಿಕತೆ’ ವಿಷಯದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಕಾರ್ಯಗಾರ ಜರುಗಿತು.

  • ಉದ್ಘಾಟನೆ ನಿರ್ವಹಿಸಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ದೇಶದ ಆರ್ಥಿಕತೆ ಕಳೆದ 10 ವರ್ಷಗಳಿಂದ ವೇಗವಾಗಿ ಬೆಳೆಯುತ್ತಿದೆ. ಮುಂದಿನ ದಿನದಲ್ಲಿ ಭಾರತವು ವಿಶ್ವದ 3ನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ. ಯುವ ಜನಾಂಗ ಅಮೃತ ಕಾಲದ ವೈಭವವನ್ನು ಅನುಭವಿಸಲಿದ್ದಾರೆ ಎಂದರು.
  • ಮುಖ್ಯ ಅತಿಥಿ ಬಿಜೆಪಿ ದಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಾತನಾಡಿ, ಸರ್ಕಾರ ಮಂಡಿಸಿದ ಬಜೆಟ್ ಚುನಾವಣಾ ಬಜೆಟ್ ಆಗದೆ, ದೇಶದ ಕಟ್ಟ ಕಡೆಯ ವ್ಯಕ್ತಿಗೆ ಆಸರೆಯಾಗುವ ಉದ್ದೇಶವನ್ನು ಹೊಂದಿದೆ ಎಂದರು.
  • ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಹಾಗೂ ಲೆಕ್ಕ ಪರಿಶೋಧಕ ಶಾಂತರಾಮ ಶೆಟ್ಟಿ ಅವರು ಪ್ರಸ್ತಾವನೆಗೈದರು. ಆರ್ಥಿಕ ಪ್ರಕೋಷ್ಠದ ಸಹ ಸಂಚಾಲಕ ಸಿಎ ಎಸ್‌ಎಸ್ ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ಬಜೆಟ್ ವಿಶ್ಲೇಷಣೆ ಮಾಡಿದರು. ಎಸ್‌ಡಿಎಮ್ ಪಿಜಿ ಸೆಂಟರ್‌ನ ನಿರ್ದೇಶಕಿ ಡಾ. ಸೀಮಾ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಪ್ರಕೋಷ್ಠದ ಸದಸ್ಯರಾದ ಸಿಎ ಶ್ರೀಕೃಷ್ಣ ಹಾಗೂ ಚಿದಾನಂದ ಉಚ್ಚಿಲ್ ಉಪಸ್ಥಿತರಿದ್ದರು. ಪ್ರೊ.ರಮ್ಯಾ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net