ಕಲಬುರಗಿ ಏನು ಅಪ್ಪ, ಮಗ, ಅಳಿಯನ ಆಸ್ತಿಯೇ ಮಾಜಿ ಸಚಿವ ಎನ್.ಮಹೇಶ ಪ್ರಶ್ನೆ

BJP RLD
Published on

ಖರ್ಗೆ ವಿರುದ್ಧ ವಾಗ್ದಾಳಿ | ಬಿಜೆಪಿಯಿಂದ ಭೀಮ ಸಮಾವೇಶ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕಲಬುರಗಿಯಲ್ಲಿ ಅಪ್ಪ, ಮಗ, ಅಳಿಯಂದೇ ಅಧಿಕಾರವೆ? ರಾಜೀನಾಮೆ ನೀಡಿ ಕಲಬುರಗಿಯಲ್ಲಿ ಮತ್ತೊಬ್ಬರಿಗೆ ಅವಕಾಶ ನೀಡಲಿ. ಇದು ಅವರ ಕುಟುಂಬದ ಆಸ್ತಿಯೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅವರು ಖರ್ಗೆ ಕುಟುಂಬದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಬುಧವಾರ ಆಯೋಜಿಸಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಧಿಕಾರ ನಡೆಸುವಂಥ ನಾಯಕರಿಲ್ಲವೆ? ದಲಿತರ ಮೀಸಲಿನಲ್ಲಿ ಗೆದ್ದು ಬಂದಿರುವ ಜನಪ್ರತಿನಿಧಿಗಳು ಮೀಸಲು ಹಣ ಕಿತ್ತು ತಿನ್ನುತ್ತಿರುವ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು. ಆದರೆ ಗ್ಯಾರಂಟಿಗಳನ್ನು ಹೊಗಳುತ್ತ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾನೂನು ಸಚಿವರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ನಂತರ ಯೋಜನಾ ಮಂತ್ರಿ ಸ್ಥಾನ ಕೇಳುತ್ತಾರೆ. ಶೋಷಿತರಿಗೆ ನೆರವು ನೀಡಲು ಯೋಜನೆ ರೂಪಿಸಲು ಅಂಗಲಾಚುತ್ತಾರೆ. ಆದರೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಆ ಸ್ಥಾನ ನೀಡುವುದಿಲ್ಲ. ಅದರ ಫಲವಾಗಿ ಆರು ಪಂಚವಾರ್ಷಿಕ ಯೋಜನೆಯ ಸುದೀರ್ಘ ೩೦ ವರ್ಷ ದಲಿತರಿಗೆ ನಯಾಪೈಸೆ ಕಾಂಗ್ರೆಸ್ ನೀಡಲಿಲ್ಲ. ಆದರೂ ದಲಿತರು ದಿಕ್ಕಿಲ್ಲದ ದೆವ್ವವನ್ನು ತಬ್ಬಿಕೊಂಡAತೆ ಕಾಂಗ್ರೆಸ್ ಅಪ್ಪಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾವೇಶ ಉದ್ಘಾಟಿಸಿದ ಕೋಲಾರ ಸಂಸದ ನಾರಾಯಣಸ್ವಾಮಿ ಮಾತನಾಡಿ, ಕಲಬುರಗಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಆಗಿಲ್ಲ. ಅವರ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಸುಮ್ಮನಿದ್ದಾರೆ. ಅಂಬೇಡ್ಕರ್ ವಿರುದ್ಧ ನೆಹರು ಪ್ರಚಾರ ಮಾಡಿ ಸೋಲಿಸಿದ್ದರು. ನೆಹರು, ರಾಜೀವ್‌ಗಾಂಧಿ, ಇಂದಿರಾಗಾAಧಿಗೆ ಭಾರತ ರತ್ನ ಕೊಟ್ಕೊಂಡ್ರು. ಆದರೆ ಅಂಬೇಡ್ಕರ್‌ಗೆ ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಮುಖಂಡ ಆರ್.ರುದ್ರಯ್ಯ ಮಾತನಾಡಿ, ದಲಿತರಿಗೆ ಮೀಸಲಾದ ೩೬ ಸಾವಿರ ಕೋಟಿ ರೂ.ಗಳಲ್ಲಿ ೧೫ ಕೋಟಿ ಗ್ಯಾರಂಟಿ, ಉಳಿದ ಹಣದಲ್ಲಿ ಸಾಮಾನ್ಯ ಯೋಜನೆಗಳಿಗೆ ಅಡ್ಡ ಮಾರ್ಗದಲ್ಲಿ ಬಳಸುತ್ತಿದ್ದಾರೆ. ಇದರ ಸೂಕ್ಷö್ಮತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ಕೋಟ್

ದಲಿತರ ರಾಜ್ಯದಲ್ಲಿ ೧೧ ಸಾವಿರ ಕೋಟಿ ರೂ. ನುಂಗಿ ಸಮುದಾಯದ ಲೀಡರ್‌ಗಳಿಗೆ ಬಿಸ್ಕಟ್ ಹಾಕಿ ಬೇರೆ ಉz್ದೆÃಶಕ್ಕೆ ಬಳಸುತ್ತಿರುವುದು ಏಕೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಂಬೇಡ್ಕರ್ ಕಾಂಗ್ರೆಸ್ ಸುಡುತ್ತಿರುವ ಮನೆ ಎಂದಿದ್ರು. ವಿಭಜನೆ ಬೇಡ ಅಂದಿದ್ರು. ಆದರೀಗ ವಿಧಾನಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುವ ನಾಲಾಯಕರಿಗೆ ಸಿದ್ದರಾಮಯ್ಯ ಸರ್ಕಾರದ ಸಾಥ್ ಇದೆ.

| ನಾರಾಯಣಸ್ವಾಮಿ ಕೋಲಾರ ಸಂಸದ

ಜ್ಞಾನದ ಸಂಕೇತ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಂತ್ಯಕ್ರಿಯೆ ಅನಾಥ ಶವಗಳ ಸ್ಥಳದಲ್ಲಿ ಕಾಂಗ್ರೆಸಿಗರು ಮಾಡಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ವಾಸವಿದ್ದು, ಅಧ್ಯಯನ ಮಾಡಿದ ಮನೆಗಳನ್ನು ಖರೀದಿಸಿ `ಮಹಾ ಪರಿನಿರ್ವಾಣ ಸ್ಥಳ'ವನ್ನಾಗಿ ಮಾಡಿದ್ದಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುವ ಖರ್ಗೆ ಅವರ ಪಕ್ಷ ೨೧ ತಿಂಗಳು ಸಂವಿಧಾನವನ್ನೇ ಅಮಾನತಿನಲ್ಲಿಟ್ಟಿತ್ತು, ೮೮ ಬಾರಿ ರಾಜ್ಯ ಸರ್ಕಾರಗಳನ್ನು ರದ್ದು ಮಾಡಿತ್ತು. ಈ ಬಗ್ಗೆ ಡಾ.ಖರ್ಗೆ ಎದೆ ಮುಟ್ಟಿಕೊಂಡು ಹೇಳಲಿ.

| ಎನ್.ಮಹೇಶ್ ಬಿಜೆಪಿ ರಾಜ್ಯ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net