

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ಹಾಗೂ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ "ಫಲಾನುಭವಿಗಳ ಸಂಪರ್ಕ ಅಭಿಯಾನ ಕಾರ್ಯಾಗಾರ' ಶನಿವಾರ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿದ ಧಾರವಾಡ ಲೋಕಸಭಾ ಕ್ಷೇತ್ರದ ಫಲಾನುಭವಿಗಳ ಸಂಪರ್ಕ ಅಭಿಯಾನ ಸಂಚಾಲಕ ಡಾ. ಕ್ರಾಂತಿಕಿರಣ ಮಾತನಾಡಿ, ಪ್ರತಿ ಬೂತ್ ಕಾರ್ಯಕರ್ತರು ತಮ್ಮ ಬೂತ್ಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ ಫಲಾನುಭವಿಗಳನ್ನು ಬಿಜೆಪಿಯ "ಸರಳ್ ಆ್ಯಪ್' ಮೂಲಕ ಗುರುತಿಸಿ, ಅವರ ಮನೆಗೆ ತೆರಳಿ ಅವರೊಂದಿಗೆ ಯೋಜನೆಗಳ ಪ್ರಯೋಜನದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದರು.
ಫಲಾನುಭವಿಗಳಿಗೆ ಆದ ಲಾಭ, ಅನುಕೂಲತೆಗಳ ಬಗ್ಗೆ ಚಚಿರ್ಸಿ ಅವರೊಂದಿಗೆ ಸೆಲ್ಫಿ ಪಡೆದು ಮತ್ತು ಯೋಜನೆ ಬಗ್ಗೆ ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದಲ್ಲಿ ಆ ವಿಡಿಯೋವನ್ನು ಆ್ಯಪ್ಗೆ ಅಪ್ಲೋಡ್ ಮಾಡಬೇಕು. ಈ ಮೂಲಕ ಪಕ್ಷದ ಅಭಿಯಾನವನ್ನು ಸಂರ್ಪೂಣ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಪೂರ್ವ ಕ್ಷೇತ್ರದ ಮಂಡಲ ಅಧ್ಯಕ್ಷ ಪ್ರಭು ನವಲಗುಂದಮಠ ಮಾತನಾಡಿ, ಕೇಂದ್ರದ ಪ್ರತಿಯೊಂದು ಯೋಜನೆಗಳು ಅತ್ಯಂತ ಪರಿಣಾಮಕಾರಿಯಾಗಿ ರೂಪಗೊಂಡಿದ್ದು ಅವುಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಫಲಾನುಭವಿಗಳ ಸಂಪರ್ಕ ಅಭಿಯಾನದಿಂದ ಪ್ರತಿ ಮನೆಗೆ ಸಂಪರ್ಕ ಸಾಧಿಸುವುದರ ಜತೆಗೆ ಬೂತ್ ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಇನ್ನಷ್ಟು ವೃದ್ಧಿಯಾಗಲಿದೆ ಎಂದು ಹೇಳಿದರು.
ಸೆಂಟ್ರಲ್ ಕ್ಷೇತ್ರದ ಮಂಡಲ ಅಧ್ಯಕ್ಷ ಸಂತೋಷ ಚವ್ಹಾಣ ಮಾತನಾಡಿ, ಪ್ರಧಾನಿ ಮೋದಿಯವರ ಆಡಳಿತದ ಕಾರ್ಯವೈಖರಿಯಿಂದಾಗಿ ವಿಶ್ವದಲ್ಲಿ ಭಾರತದ ಗೌರವ, ಘನತೆ ಹೆಚ್ಚಿದೆ. ಭ್ರಷ್ಟಾಚಾರ ಮುಕ್ತ ಆಡಳಿತ, ಸದೃಢ ಆಥಿರ್ಕತೆ, ಇತ್ಯಾದಿಗಳ ಬಗ್ಗೆ ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನಮುಟ್ಟುವಂತೆ ಮಾಡುವ ಹೊಣೆ ಬೂತ್ ಪದಾಧಿಕಾರಿಗಳ ಮೇಲಿದೆ ಎಂದರು.
ಅಭಿಯಾನದ ಸಹ ಸಂಚಾಲಕಿ ರ್ಪೂಣಿಮಾ ಶಿಂಧೆ, ಧಾರವಾಡ ಲೋಕಸಭಾ ಚುನಾವಣೆ ವಿಸ್ತಾರಕಿ ಭಾಗ್ಯಲಕ್ಷಿ$್ಮ ಕಮ್ಮಾರ, ಪಕ್ಷದ ಪ್ರಮುಖರಾದ ಅಶೋಕ ವಾಲ್ಮೀಕಿ, ಸುಭಾಷ್ ಅಂಕಲಕೋಟಿ, ಪೂಜಾ ರಾಯ್ಕರ್, ಮಹಾನಗರ ಪಾಲಿಕೆ ಸದಸ್ಯರು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.