

ಬಂಟ್ವಾಳ: ಇಲ್ಲಿನ ಬಾಳ್ತಿಲ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಿತಿನ್ ಕುಮಾರ್ ಗೆಲುವು ಸಾಧಿಸಿದ್ದಾರೆ. ನಿತಿನ್ ಕುಮಾರ್ 419 ಮತ, ಕಾಂಗ್ರೆಸ್ನ ಯೋಗೀಶ್ಗೆ 187 ಮತ ಲಭಿಸಿದ್ದು, 5 ಮತ ಅಸಿಂಧು ಆಗಿದೆ. ನಿತಿನ್ಕುಮಾರ್ ಒಟ್ಟು 232 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಅವರ ಬೂತ್ನಲ್ಲೇ ನಡೆದ ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದೊರೆತು ಗ್ರಾಪಂನಲ್ಲಿ ಎಲ್ಲಾ 16 ಸ್ಥಾನಗಳು ಬಿಜೆಪಿ ತೆಕ್ಕೆಯಲ್ಲಿದೆ. ಬಾಳ್ತಿಲ ಗ್ರಾಪಂ ಅಧ್ಯಕ್ಷರಾಗಿದ್ದ ಅಣ್ಣು ಪೂಜಾರಿ ನಿಧನದಿಂದ ತೆರವಾದ ಸ್ಥಾನಕ್ಕೆ ಈ ಉಪಚುನಾವಣೆ ನಡೆದಿತ್ತು.