ಕಾರಟಗಿಯಲ್ಲಿ ಪ್ರಜಾಸೌಧ ನಿರ್ಮಿಸಿ

krt-1
ಜೂರಟಗಿಯಲ್ಲಿ ಪ್ರಜಾಸೌಧ ನಿರ್ಮಾಣ ಮಾಡದಂತೆ ಒತ್ತಾಯಿಸಿ ಬಿಜೆಪಿ ತಾಲೂಕು ಘಟಕದಿಂದ ಗ್ರೇಡ್ 2 ತಹಸೀಲ್ದಾರ್ ವಿಶ್ವೇಶ್ವರಯ್ಯ ಸಾಲಿಮಠಗೆ ಕಾರಟಗಿಯಲ್ಲಿ ಮನವಿ ಸಲ್ಲಿಸಲಾಯಿತು. ಮಂಡಲ ಬಿಜೆಪಿ ಅಧ್ಯಕ್ಷ ಮಂಜುನಾಥ ಮಸ್ಕಿ, ಪದಾಧಿಕಾರಿಗಳಾದ ಸತ್ಯನಾರಾಯಣ ದೇಸಾಯಿ, ಆನಂದ ಕೆಂಗೇರಿ, ಶರಣಪ್ಪ ದೇವರಮನಿ, ಶಶಿ ಮೇಧಾರ್, ಹುಲಗಪ್ಪ ಚಾಪುಡಿ ಇದ್ದರು.
Published on

ಕಾರಟಗಿ: ಪಟ್ಟಣದಿಂದ ದೂರವಿರುವ ಜೂರಟಗಿಯ ಸರ್ವೇ ನಂ.265ರಲ್ಲಿ ಪ್ರಜಾಸೌಧ ನಿರ್ಮಾಣ ಮಾಡದಂತೆ ಒತ್ತಾಯಿಸಿ ಬಿಜೆಪಿ ತಾಲೂಕು ಘಟಕದ ಪದಾಧಿಕಾರಿಗಳು ಗ್ರೇಡ್ 2 ತಹಸೀಲ್ದಾರ್ ವಿಶ್ವೇಶ್ವರಯ್ಯ ಸಾಲಿಮಠಗೆ ಗುರುವಾರ ಮನವಿ ಸಲ್ಲಿಸಿದರು.

ಜೂರಟಗಿ ಕಾರಟಗಿ ಪಟ್ಟಣದಿಂದ ದೂರವಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತದೆ. ತಾಲೂಕು ದಂಡಾಧಿಕಾರಿಗಳು ಇದನ್ನರಿತು, ನಗರದ ಹೃದಯ ಭಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬೇಕು.

ಇದರಿಂದ ಆಡಳಿತ ಸುಗಮವಾಗಿ ನಡೆಯುವುದರ ಜತೆಗೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ರಾಜಕೀಯ ಒತ್ತಡಕ್ಕೆ ಮಣಿದು ಜೂರಟಗಿಯಲ್ಲಿ ಪ್ರಜಾಸೌಧ ನಿರ್ಮಾಣ ಮಾಡಿದರೆ, ಬಿಜೆಪಿಯಿಂದ ಸಾರ್ವಜನಿಕರ ಜತೆಗೂಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net