10 ನಿರ್ದೇಶಕ ಬಲದ ಉಪ್ಪಾರಕನಹಳ್ಳಿ ಡೇರಿ ಆಡಳಿತ ಮಂಡಳಿಗೆ ಗುರುವಾರ ಚುನಾವಣೆ ನಡೆಯಿತು. ಕಾಂಗ್ರೆಸ್ ವಿರುದ್ಧ ಚುನಾವಣೆ ಎದುರಿಸಿದ ಬಿಜೆಪಿ, ಜೆಡಿಎಸ್ 8 ಸ್ಥಾನ ಗೆದ್ದುಕೊಂಡಿತು. ಮೈತ್ರಿ ಅಭ್ಯರ್ಥಿಯಾಗಿದ್ದ ಬಿಜೆಪಿಯ ಪುಷ್ಪವತಿ, ಲೋಕೇಶ್, ಜೆಡಿಎಸ್‌ನ ಶಶಿಕಲಾ, ಚೆನ್ನಮ್ಮ, ನಾಥೇಗೌಡ, ರುದ್ರೇಗೌಡ, ಲಕ್ಷ್ಮೀ, ಸಿದ್ದಗೌರಮ್ಮ ಆಯ್ಕೆಯಾದರು. ಅಂತೆಯೇ ಕಾಂಗ್ರೆಸ್‌ನಿಂದ ರಮೇಶ್, ಪಕ್ಷೇತರ ಅಭ್ಯರ್ಥಿ ಪ್ರಭಾಕರ್ ಚುನಾಯಿತರಾದರು.