ತೀರ್ಥಹಳ್ಳಿ ತಾಲೂಕಿನಲ್ಲಿ ಬಿಜೆಪಿ, ಕಾಂಗ್ರೆಸ್ ಸಮಬಲ

11 tth 03
ಮುಳುಬಾಗಿಲು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಬಿ.ಆರ್.ಮೋಹನ್, ಗೀತಾ ಶೆಟ್ಟಿ ಇತರರಿದ್ದರು.
Published on

ತೀರ್ಥಹಳ್ಳಿ: ತಾಲೂಕಿನ 9 ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಬಹುತೇಕ ಬಿಜೆಪಿ- ಕಾಂಗ್ರೆಸ್ ಪಕ್ಷಗಳು ಸಮಾನ ಗೆಲುವನ್ನು ಸಾಧಿಸಿವೆ. ಮುಳುಬಾಗಿಲು, ಮೇಳಿಗೆ ಮತ್ತು ದೇವಂಗಿ ಗ್ರಾಪಂ ಬಿಜೆಪಿ ಬೆಂಬಲಿತರು, ಮಂಡಗದ್ದೆ, ತೀರ್ಥಮತ್ತೂರು ಮತ್ತು ಬಾಂಡ್ಯ-ಕುಕ್ಕೆ ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುಳುಬಾಗಿಲು ಗ್ರಾಪಂಗೆ ಸಂಧ್ಯಾ ಅಧ್ಯಕ್ಷರಾಗಿದ್ದು ಸಂತೋಷ್ ಮೀನುಗುಂದ ಉಪಾಧ್ಯಕ್ಷರಾಗಿದ್ದಾರೆ. ಮೇಳಿಗೆ ಪಂಚಾಯಿತಿಯಲ್ಲಿ ಹಿಂದಿನ ಅವಧಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದವರ ಸ್ಥಾನಗಳು ಅದಲು ಬದಲಾಗಿದ್ದು ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಎಚ್.ಎನ್.ವಿಜಯಾ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷರಾಗಿದ್ದ ಎನ್.ಮುರುಳಿ ಉಪಾಧ್ಯಕ್ಷರಾಗಿದ್ದಾರೆ. ದೇವಂಗಿ ಗ್ರಾಪಂಗೆ ಕ್ರಮವಾಗಿ ಗಿರಿಜಾ ಕುಮಾರ್ ಹಾಗೂ ಅನ್ನಪೂರ್ಣಾ ವಿಜಯ್ ಅಧ್ಯಕ್ಷ-ಉಪಾಧ್ಯಕ್ಷರಾಗಿ ಚುನಾಯಿತರಾದರು.
ಕಾಂಗೆಸ್ ಬೆಂಬಲಿತ ತೂದೂರು ಗ್ರಾಪಂನಲ್ಲಿ ಶಶಿಕಲಾ ದೇವರಾಜ್ ಅಧ್ಯಕ್ಷರಾಗಿ, ಎಂ.ಡಿ.ಅರವಿಂದ ಉಪಾಧ್ಯಕ್ಷರಾಗಿದ್ದಾರೆ. ಬಾಂಡ್ಯ-ಕುಕ್ಕೆ ಗ್ರಾಪಂನಲ್ಲಿ ಸಚಿನ್‌ಕುಮಾರ್, ಡಿ.ಕೆ.ಶ್ಯಾಮಲಾ, ನಾಲೂರು-ಕೊಳಗಿ ಗ್ರಾಪಂನಲ್ಲಿ ಸುಧಾ ದೇವರಾಜ್, ಅನಿತಾ ಸಾಧು, ತೀರ್ಥಮತ್ತೂರು ಗ್ರಾಪಂನಲ್ಲಿ ಉಷಾ ಸುಬ್ರಹ್ಮಣ್ಯ, ಗಿರೀಶ್ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net