

ಕಾರಟಗಿ: ಮೂರು ಬಾರಿ ಗೆಲುವು ಸಾಧಿಸುವ ಜತೆಗೆ ಮಂತ್ರಿಯೂ ಆಗಿರುವ ಶಿವರಾಜ ತಂಗಡಗಿಯವರಿಗೆ ಬಿಜೆಪಿಯವರ ಅನುಪಯುಕ್ತ ಸಲಹೆಗಳು ಅಗತ್ಯವಿಲ್ಲ ಎಂದು ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ ಶುಕ್ರವಾರ ತಿಳಿಸಿದ್ದಾರೆ.
ಇದನ್ನೂ ಓದಿ:http://ಬಿಜೆಪಿಯವರ ಸಲಹೆ ಅಗತ್ಯವಿಲ್ಲ
ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ಸೋತು ಕಂಗೆಟ್ಟಿರುವ ಬಿಜೆಪಿಯವರು ಸಚಿವ ಶಿವರಾಜ ತಂಗಡಗಿ ವಿರುದ್ಧ ಸಲ್ಲದ ಸುಳ್ಳು ಪ್ರಚಾರ ಮಾಡುವುದನ್ನು ಕೈ ಬಿಡಬೇಕು.
ಮಾಜಿ ಶಾಸಕ ಬಸವರಾಜ ದಢೇಸುಗೂರು ಈ ಹಿಂದೆ ರೈತ ಸಮಾವೇಶವೊಂದರಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರಷ್ಟೇ ಸಮಸ್ಯೆಗಳು ಅರ್ಥವಾುತ್ತವೆ ಎಂದು ಹೇಳುವ ಮೂಲಕ ಅವಮಾನ ಮಾಡಿದ್ದು ಯಾರೂ ಮರೆತಿಲ್ಲ.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ರಸಗೊಬ್ಬರ, ಕೀಟನಾಶಕ, ಪೆಟ್ರೋಲ್, ಡೀಸೆಲ್ ಹಾಗೂ ಕೃಷಿ ಉಪಕರಣಗಳ ಬೆಲೆ ಗಗನಕ್ಕೆ ಏರಿವೆ. ಈ ಹಿಂದೆ ಅತಿವೃಷ್ಟಿ ಉಂಟಾದಾಗ ಶಿವರಾಜ ತಂಗಡಗಿಯವರು ಮುಖ್ಯಮಂತ್ರಿ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿ ಹೆಕ್ಟೇರ್‌ಗೆ 25 ಸಾರವಿ ರೂ. ಪರಿಹಾರ ಕೊಡಿಸಿದ್ದರು.
ಈಗಾಗಲೇ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಅಲ್ಲಲ್ಲಿ ಕಾಲುವೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುವುದು, ಸುಳ್ಳು ಪ್ರಚಾರ ಮಾಡುವುದು ಮತ್ತು ಅನುಪಯುಕ್ತ ಸಲಹೆ ಕೊಡುವುದನ್ನು ನಿಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಾಕೀತು ಮಾಡಿದ್ದಾರೆ.