ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

43
ಚಿಕ್ಕೋಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಹಿ ಹಂಚಿ ವಿಜಯೋತ್ಸವ ಆಚರಿಸಿದರು. ಡಾ.ರಾಜೇಶ ನೇರ್ಲಿ, ದುಂಡಪ್ಪ ಬೆಂಡವಾಡೆ, ಸತೀಶ ಅಪ್ಪಾಜಿಗೋಳ, ಶಾಂಭವಿ ಅಶ್ವತ್ಥಪುರ ಇತರರಿದ್ದರು.
Published on

ಚಿಕ್ಕೋಡಿ: ಪಂಚರಾಜ್ಯಗಳಲ್ಲಿ ಹೊರಹೊಮ್ಮಿದ ಚುನಾವಣೆ ಲಿತಾಂಶ ಮುಂಬರುವ 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ ಹೇಳಿದರು.

ಪಟ್ಟಣದ ಬಸವ ಸರ್ಕಲ್‌ನಲ್ಲಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಲಿತಾಂಶ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಭಾನುವಾರ ವಿಜಯೋತ್ಸವ ಆಚರಿಸಿ ಮಾತನಾಡಿದರು. ಪಂಚರಾಜ್ಯ ಚುನಾವಣೆ ಲಿತಾಂಶದಲ್ಲಿ ನಾಲ್ಕು ರಾಜ್ಯಗಳ ಪೈಕಿ, ಮೂರರಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಐತಿಹಾಸಿಕ ಜಯಗಳಿಸಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯೇಂದ್ರ ಸಾರಥ್ಯದಲ್ಲಿ 28 ಸ್ಥಾನಗಳ ಪೈಕಿ 28ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು. ರಾಜ್ಯ ಕೃಷಿ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಾಂಭವಿ ಅಶ್ವತ್ಥಪುರ, ಅಪ್ಪಾಸಾಹೇಬ ಚೌಗಲಾ, ಪವನ ಮಹಾಜನ, ನಾಗರಾಜ ಮೇದಾರ, ಕೈಲಾಸ ಮಾಳಗೆ, ಸುಮಾ ಗವಿ, ಶಿವಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net