ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

0101
Published on

ಶಾಸಕ ಪಾಟೀಲ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

ಸಂಬರಗಿ: ಕಾಗವಾಡ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮತ ಕ್ಷೇತ್ರದ ವಿವಿಧೆಡೆ ಸಂಭ್ರಮ ಆಚರಿಸಲಾಯಿತು.

ಕೆಂಪವಾಡ, ಕಾಗವಾಡ, ಶೇಡಬಾಳ, ಉಗಾರ, ಕುಸನಾಳ, ಐನಾಪುರ, ಶಿರಗುಪ್ಪಿ, ಜುಗೂಳ, ಮಂಗಾವತಿ, ಮಂಗಸೂಳಿ, ಲೋಕುರ ಮೊದಲಾದ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಚಿವ ಶ್ರೀಮಂತ ಬಾಳಾಸಾಬ ಪಾಟೀಲರ ಪರ ಜೈ ಘೋಷ ಕೂಗಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೆಂಪವಾಡ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಂಭ್ರಮ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net