

ಮಡಿಕೇರಿ:
ಬಿಜೆಪಿ ಸದಸ್ಯತ್ವ ಅಭಿಯಾನ ಕೊಡಗಿನಲ್ಲಿ ಈ ಬಾರಿ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಕಳೆದ ಬಾರಿಗೆ ಹೋಲಿಸಿದರೆ 10 ಸಾವಿರದಷ್ಟು ಅಧಿಕ ಸದಸ್ಯರತ್ವ ಆಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.
ಪ್ರತಿ 3 ವರ್ಷಗಳಿಗೆ ಒಂದು ಬಾರಿ ರಾಷ್ಟಾçದ್ಯಂತ ಬಿಜೆಪಿ ಹೊಸದಾಗಿ ಪಕ್ಷದ ಸದಸ್ಯತ್ವವನ್ನು ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತ ಸದಸ್ಯತ್ವ ಪಡೆಯುದರ ಮೂಲಕ ಮತ್ತು ಹೊಸದಾಗಿ ಸದಸ್ಯರುಗಳನ್ನು ಮಾಡಿಸುವುದರ ಮೂಲಕ ಸದಸ್ಯತ್ವ ಅಭಿಯಾನವನ್ನು ಪಕ್ಷದ ಆರಂಭ ದಿನಗಳಿಂದಲೂ ಮಾಡುತ್ತಾ ಬರಲಾಗಿದೆ, ಅದೇ ರೀತಿಯಲ್ಲಿ ಕೊಡಗಿನಲ್ಲೂ ನಿರೀಕ್ಷೆಗೂ ಮೀರಿ ಅಭಿಯಾನ ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ ದಾಖಲೆಯ ಸುಮಾರು 65 ಸಾವಿರ ಸದಸ್ಯರು ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಸಕ್ರಿಯ ಸದಸ್ಯರ ಸಂಖ್ಯೆ ಕೂಡ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ ಒಬ್ಬ ಸದಸ್ಯ ಕನಿಷ್ಠ 100 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರುಗಳನ್ನು ಮಾಡಿದರೆ ಆತ ಪಕ್ಷದ ಸಕ್ರಿಯ ಸದಸ್ಯನಾಗುತ್ತಾನೆ. ಇದೆಲ್ಲವೂ ಆನ್ಲೆöÊನ್ ಪ್ರಕ್ರಿಯೆ ಆಗಿದ್ದು ಪ್ರತಿ ಸದಸ್ಯನ ಸಂಪೂರ್ಣ ಮಾಹಿತಿ ಕೂಡ ಪಕ್ಷದ ಕೇಂದ್ರ ಕಚೇರಿಯಲ್ಲಿ ಲಭ್ಯವಿರುತ್ತದೆ.
ಈಗಾಗಲೇ ಕೊಡಗಿನ ನಾಲ್ಕು ಮಂಡಲಗಳಿAದ ಸುಮಾರು 500 ಕ್ಕೂ ಅಧಿಕ ಸಂಖ್ಯೆಯ ಸದಸ್ಯರು ಕೊಡಗಿನಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ.
ಪಕ್ಷದ ಬೂತ್ ಸಮಿತಿ ಅಧ್ಯಕ್ಷರುಗಳಿಂದ ಹಿಡಿದು ರಾಷ್ಟಿçÃಯ ಅಧ್ಯಕ್ಷರುಗಳ ಆಯ್ಕೆಯ ವರೆಗೂ ಆಯ್ಕೆ ಪ್ರಕ್ರಿಯೆ ನಡೆಯುವ ಮೊದಲು ಸದಸ್ಯತ್ವ ಅಭಿಯಾನ ಮತ್ತು ಸಕ್ರಿಯ ಸದಸ್ಯರುಗಳ ಪಟ್ಟಿ ತಯಾರಾಗಿರಬೇಕು. ಈಗಾಗಲೇ ಕೊಡಗಿನಲ್ಲಿ ಶೇ. 80 ಬೂತ್ ಸಮಿತಿಗಳ ರಚನೆಯಾಗಿದ್ದು ಮುಂದಿನ ಹಂತದಲ್ಲಿ ಪಕ್ಷದ 4 ಮಂಡಲಗಳು ಮತ್ತು ಪದಾಧಿಕಾರಿಗಳ ಆಯ್ಕೆಗಾಗಿ ಜ. 11 ಶನಿವಾರ ವಿರಾಜಪೇಟೆ ಮತ್ತು ಜ. 13 ಸೋಮವಾರ ಸೋಮವಾರಪೇಟೆ ಮಂಡಲ, ಮಡಿಕೇರಿ ಗ್ರಾಮಾಂತರ ಮಂಡಲ ಹಾಗೂ ಮಡಿಕೇರಿ ನಗರ ಮಂಡಲದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮುಂದೆ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಕೂಡ ಇದೇ ರೀತಿ ನಡೆಯಲಿದೆ ಜಿಲ್ಲೆಯಲ್ಲಿ ಪಕ್ಷ ಸಂಘಟನಾತ್ಮಕವಾಗಿ ಬಲಿಷ್ಠವಾಗಿದ್ದು ಕಳೆದ ಲೋಕಸಭಾ ಚುನಾವಣೆ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ನಡೆಯುತ್ತಿರುವ ಸಹಕಾರ ಸಂಘಗಳ ಚುನಾವಣೆಯಲ್ಲಿ ಕೂಡ ಪಕ್ಷದ ಅಭ್ಯರ್ಥಿಗಳು ಅಭೂತಪೂರ್ವ ಜಯ ದಾಖಲಿಸುತ್ತಿರುವುದು ಪಕ್ಷದ ಸಂಘಟನೆ ಜಿಲ್ಲೆಯಲ್ಲಿ ಗಟ್ಟಿಯಾಗಿರುವುದಕ್ಕೆ ಸಾಕ್ಷಿಯಾಗಿದೆ.
ಸಂಘಟನಾ ಪರ್ವ ಹೆಸರಿನಲ್ಲಿ ನಡೆಯುತ್ತಿರುವ ಈ ಸದಸ್ಯತ್ವ ಅಭಿಯಾನ ಸಕ್ರಿಯ ಸದಸ್ಯರುಗಳ ಆಯ್ಕೆ, ಬೂತ್ ಮತ್ತು ಮಂಡಲ ಪದಾಧಿಕಾರಿಗಳ ಆಯ್ಕೆ ಗೆ ಸಂಬAಧಿಸಿದAತೆ 3 ಜಿಲ್ಲೆಗಳ ಜವಾಬ್ದಾರಿಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ನಿಬಾಹಿಸುತ್ತಿದ್ದಾರೆ. ಜಿಲ್ಲೆಗೆ ಚುನಾವಣೆ ಅಧಿಕಾರಿಯಾಗಿ ಸುಲೋಚನಾ ಭಟ್, ಸಹ ಚುನಾವಣೆ ಅಧಿಕಾರಿಗಳಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮತ್ತು ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ ಕಾರ್ಯ ನಿರ್ವಹಿಸುತ್ತಿದ್ದಾರೆ ಮುಂದೆ ಕೊಡಗಿನಲ್ಲಿ ಪಕ್ಷ ಇನ್ನಷ್ಟು ಪ್ರಬಲವಾಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.