

ಮಡಿಕೇರಿ:
ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಗ್ಯಾರಂಟಿಗಳ ಘೋಷಣೆಗಳಿಂದ ಅಧಿಕಾರಕ್ಕೆ ಬಂದಿದೆಯೇ ಹೊರತೂ ಇದು ಬಿಜೆಪಿ ಆಡಳಿತದ ವಿರುದ್ಧದ ಜನಾಭಿಪ್ರಾಯ ಅಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಹೇಳಿದ್ದಾರೆ. ಕಳೆದ ಅವಧಿಯ ಮುಖ್ಯಮಂತ್ರಿಗಳಾದ ಯಡ್ಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲಾ ರಂಗದಲ್ಲೂ ಯಶಸ್ವಿ ಆಡಳಿತ ನಡೆಸುತ್ತಾ ರಾಜ್ಯದ ಜನರ ಮನ ಗೆದ್ದಿತ್ತು. ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುದು ಖಚಿತ ಎಂದು ಅನೇಕ ಚುನಾವಣಾ ಸಮೀಕ್ಷೆಗಳು ವರದಿ ಮಾಡಿದನ್ನು ಅರಿತ ಕಾಂಗ್ರೆಸ್ ಇನ್ನೊಂದು ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಸೇರಿದಂತೆ ದೇಶದ ಯಾವುದೇ ಭಾಗದಲ್ಲೂ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ನಿರ್ನಾಮವಾಗಲಿದೆ ಎಂದು ಅರಿತು ಈ ಸುಳ್ಳುಗ್ಯಾರಂಟಿಗಳ ಮೊರೆ ಹೋಯಿತು ಗೆದ್ದರೆ ಯಾವುದೇ ಕಾರಣಕ್ಕೂ ಈ ಗ್ಯಾರಂಟಿಗಳನ್ನು ಜಾರಿಗೆ ತರಲು ಸಾಧ್ಯವಿಲ್ಲಾ ಎಂದು ಗೊತ್ತಿದರೂ ಚುನಾವಣೆ ಗೆಲುವಿಗಾಗಿ ವಾಮಾ ಮಾರ್ಗ ಹಿಡಿದು ರಾಜ್ಯದ ಜನತೆಗೆ ಮೋಸ ಮಾಡಿ ಅಧಿಕಾರಕ್ಕೆ ಬಂತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಚುನಾವಣೆ ಪ್ರಚಾರದ ಎಲ್ಲಾ ವೇದಿಕೆಗಳಲ್ಲೂ ರಾಜ್ಯದ ಎಲ್ಲಾ ಜನರಿಗೂ ೧೦ ಕೆ.ಜಿ. ಅಕ್ಕಿ ಎಂದು ಎರೆಡೆರಡು ಬಾರಿ ಹೇಳಿದಲ್ಲದೆ ಅಲ್ಲಿ ಸೇರೆದಿದ್ದ ಅಮಾಯಕ ಜನರ ಬಾಯಲ್ಲೂ ಎಷ್ಟು ಕೆ. ಜಿ. ಅಕ್ಕಿ ಅಂತ ಹೇಳಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವಾಗ ಖುಷಿ ಪಟ್ಟ ಕಾಂಗ್ರೆಸ್ ಇಂದು ೧೦ ಕೆ.ಜಿ.ಗೆ ಅರ್ಧ ಕೆ. ಜಿ ಕೂಡ ಕಡಿಮೆ ಯಾಗದಂತೆ ಅಕ್ಕಿ ನೀಡಬೇಕು. ಇದರ ಬದಲು ಕೇಂದ್ರದ ಹೆಸರು ಹೇಳಿಕೊಂಡು ಜನರಿಗೆ ಮೋಸ ಮಾಡುವುದನ್ನು ತಕ್ಸಣ ನಿಲ್ಲಿಸಬೇಕು. ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಿಂದಿನಿಂದಲೂ ೫ ಕೆ.ಜಿ. ಅಕ್ಕಿ ನುಡಿದಂತೆ ಜನತೆಗೆ ಕೊಡುತ್ತಾ ಬರುತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆಗಳ ಮೂಲಕ ಮುಗ್ದ ಜನತೆಗೆ ಮೋಸ ಮಾಡುತ್ತಿದೆ. ಇವರು ನೀಡಿದ ಎಲ್ಲಾ ಗ್ಯಾರಂಟಿಗಳು ಕೂಡ ಸದ್ಯದ ಬೀಸುವ ದೊಣ್ಣೆ ಯಿಂದ ಪಾರಾಗುವ ತಂತ್ರವೇ ಹೊರತೂ ಕೊಟ್ಟ ಮಾತಿನಂತೆ ನಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯಾವುದೇ ಮುಂದಾಲೋಚನೆ ಮತ್ತು ಪೂರ್ವತಯಾರಿ ಇಲ್ಲದೆ ತಾನು ಈ ಹಿಂದೆ ಕೆಲ ರಾಜ್ಯಗಳಲ್ಲೂ ಕೂಡ ಇದೆ ಭರವಸೆ ನೀಡಿ ಅಧಿಕಾರಕ್ಕೆ ಬಂದು ವರ್ಷಗಳೇ ಕಳೆದರೂ ಯಾವುದೇ ಗ್ಯಾರಂಟಿಯನ್ನು ಇನ್ನೂ ಈಡೇರಿಸಿಲ್ಲ. ಕೇವಲ ಮುಂದಿನ ಲೋಕಸಭಾ ಚುನಾವಣೆಯವರೆಗೆ ಕೆಲ ಷರತ್ತುಗಳೊಂದಿಗೆ ಗ್ಯಾರಂಟಿ ಪೂರೈಸಲು ಒದ್ದಾಡುತಿರುವ ಕಾಂಗ್ರೆಸ್ ಆ ಚುನಾವಣೆ ಮುಗಿಡೊಡನೆಯೇ ರಾಜ್ಯದ ಜನತೆಗೆ ಮೋಸ ಮಾಡುವುದು ಖಚಿತ ಎಂದಿದ್ದಾರೆ. ಇವರ ಇವರ ನಿಜ ಬಣ್ಣವನ್ನು ಬಯಲು ಮಾಡಲು ಬಿಜೆಪಿ ಈಗಾಗಲೇ ಪ್ರತಿಭಟನೆಗೆ ಸಜ್ಜಾಗಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯ ನಾಯಕರುಗಳ ನೇತೃತ್ವದಲ್ಲಿ ಜುಲೈ ೪ ರಂದು ಹೋರಾಟದ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರದ ನಿಜ ರೂಪವನ್ನು ಜನತೆ ಮುಂದೆ ಬಯಲು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.