

ಮಡಿಕೇರಿ:
ಕೊಡಗಿನ ನಾಯಕರುಗಳ ಮೇಲೆ ಕಾಂಗ್ರೆಸ್ ಹೈ ಕಮಾಂಡ್ ವಿಶ್ವಾಸ ಇಟ್ಟಿಲ್ಲದ ಕಾರಣ ಹೊರಗಿನ ಅಭ್ಯರ್ಥಿಗಳನ್ನು ಚುನಾವಣ ಕಣಕ್ಕಿಳಿಸಿ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರನ್ನು ಕೇವಲ ಪ್ರಚಾರ ಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕೊಡಗು ಬಿಜೆಪಿ ವಕ್ತಾರ ಮಹೇಶ್ ಜೈನಿ ಹೇಳಿದ್ದಾರೆ.
ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕೊಡಗಿನ ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈ ಆಯ್ಕೆ ಕೊಡಗು ಕಾಂಗ್ರೆಸ್‌ಗೆ ಅನಿವಾರ್ಯ. ಏಕೆಂದರೆ ಕಳೆದ ಕೆಲ ಚುನಾವಣೆಗಳಿಂದ ಒಬ್ಬ ಶಾಸಕನಾಗುವ ಅರ್ಹತೆ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂಬುದನ್ನು ರಾಜ್ಯ ಕಾಂಗ್ರೆಸ್ ನಾಯಕರು ಮನಗಂಡಿದ್ದು ಈ ಬಾರಿ ಕೂಡ ಹೊರಗಿನ ಅಭ್ಯರ್ಥಿಗಳನ್ನು ಕಾಂಗ್ರೆಸ್‌ಚಕಾರ್ಯಕರ್ತರ ಮೇಲೆ ಹೇರಲಾಗಿದೆ. ೨ ಕ್ಷೇತ್ರಗಳಲ್ಲಿ ಒಬ್ಬರು ಹೊರ ಜಿಲ್ಲೆಯವರಾಗಿದ್ದರೆ ಮತೊಬ್ಬರು ವಿ ಕೇಂಡ್ ಪ್ರವಾಸಿಗ ಎಂದು ಲೇವಡಿ ಮಾಡಿರುವ ಅವರು ಕೊಡಗು ಕಾಂಗ್ರೆಸ್ ಮತ್ತು ಕಾರ್ಯಕರ್ತರಲ್ಲಿ ಅವರ ಹೈಕಮಾಂಡ್‌ಗೆ ವಿಶ್ವಾಸ ಇಲ್ಲದಿರುವುದು ಅನೇಕ ಚುನಾವಣೆಗಳಿಂದ ಸಾಬೀತಾಗಿದೆ ಎಂದಿದ್ದಾರೆ.