ಭಾನುವಾರ ಬಿಟ್ಟಂಗಾಲದಲ್ಲಿ ಕೊಡವ ಭಾಷಿಕರ ಸಂಗಮ

saba subramani - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ಫೆ.೧೯ ರಂದು ೧೮ ಕೊಡವ ಭಾಷಿಕ ಜನಾಂಗಗಳ ಒತ್ತೋರ್ಮೆ ಕೂಟ ಆಯೋಜಿಸಲಾಗಿದೆ ಎಂದು ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ತಿಳಿಸಿದ್ದಾರೆ.

ಬಿಟ್ಟಂಗಾಲದಲ್ಲಿರುವ ಕೊಡಗು ಹೆಗ್ಗಡೆ ಸಮಾಜ ಸಭಾಂಗಣದಲ್ಲಿ ಅಂದು ಬೆಳಗ್ಗೆ ೯.೩೦ ರಿಂದ ಸಂಜೆ ೫ ಗಂಟೆಯವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ೯.೩೦ಕ್ಕೆ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಜಾನಪದ ಕಲಾ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ವಸ್ತು ಪ್ರದರ್ಶನವನ್ನು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾನಪದ ಸಾಂಸ್ಕೃತಿಕ ಮತ್ತು ಕಲಾ ಪ್ರದರ್ಶನವನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಸಭಾ ಕಾರ್ಯಕ್ರಮವನ್ನು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಮಾಜಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಸಮಾಜ ಸೇವಕ ಕೆ.ಎಂ. ಗಣೇಶ್, ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟ ಅಧ್ಯಕ್ಷ ಕೊರಕುಟ್ಟಿರ ಸರಾ ಚಂಗಪ್ಪ, ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬಬ್ಬಿರ ಸರಸ್ವತಿ ಪಾಲ್ಗೊಳ್ಳಲಿದ್ದಾರೆ.

ಹಂಪಿ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗ ಮುಖ್ಯಸ್ಥ ಡಾ.ವಿಜಯ್ ಪೂಣಚ್ಚ ತಂಬಂಡ ಮುಖ್ಯಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೊಡವ ಭಾಷಿಕ ಸಮುದಾಯಗಳ ಕೂಟ ಅಧ್ಯಕ್ಷ ಡಾ.ಮೇಚಿರ ಸುಭಾಶ್ ನಾಣಯ್ಯ ವಹಿಸಲಿದ್ದಾರೆ.

ಕೊಡಗು ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನ್ನಂಡ ಪ್ರಥ್ಯು, ಐರಿ ಸಮಾಜ ಅಧ್ಯಕ್ಷ ಮೇಲತ್ತಂಡ ರಮೇಶ್, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಕಸ್ತೂರಿ ಗೋವಿಂದಮ್ಮಯ್ಯ, ಕೊಡಗು ಕೆಂಬಟ್ಟಿ ಸಮಾಜ ಅಧ್ಯಕ್ಷ ದೊಡ್ಡಕುಟ್ಟಡ ರಾಮು ಅಯ್ಯಪ್ಪ, ಕೊಯವ ಸಮಾಜ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ, ಸವಿತಾ ಸಮಾಜ ಅಧ್ಯಕ್ಷ ವೇದಪ್ಪಂಡ ಬಿದ್ದಪ್ಪ, ಕುಡಿಯ ಸಮಾಜ ಅಧ್ಯಕ್ಷ ಕುಡಿಯರ ಮುತ್ತಪ್ಪ, ಕಣಿಯ ಸಮಾಜ ಮುಖಂಡ ಕಣಿಯರ ಪ್ರಕಾಶ, ಪಣಿಕ ಸಮಾಜ ಅಧ್ಯಕ್ಷ ಪೊನ್ನಜ್ಜೀರ ದಿನೇಶ್ ಸೋಮಯ್ಯ, ಕೊಲೇಯ ಸಮಾಜ ಅಧ್ಯಕ್ಷ ಕೊಲೇಯಂಡ ಗಿರೀಶ್, ಬೂಣೆಪಟ್ಟಮ ಸಮಾಜ ಮುಖಂಡ ಜೋಕೀರ ಜೀವನ್, ಬಣ್ಣ ಸಮಾಜದ ಬೀಕಚಂಡ ಬೆಳ್ಯಪ್ಪ, ಮಡಿವಾಳ ಸಮಾಜ ಮುಖಂಡ ಪಾತಂಡ ಸಂತೋಷ್, ಗೊಲ್ಲ ಸಮಾಜಅಧ್ಯಕ್ಷ ಪೊನ್ನುಕಂಡ ಚಿತ್ರಾ ಮಾದಪ್ಪ, ಮಲೀಯ ಸಮಾಜ ಅಧ್ಯಕ್ಷ ಮಲೆಯಡ ರಾಜಾ ಮುತ್ತಪ್ಪ, ಕೊಡಗು ನಾಯರ್ ಸಮಾಜ ಮುಖಂಡ ನಾಯಮಂಡ ರನ್ನ ಮೇದಪ್ಪ, ಕಾಪಾಳ ಸಮಾಜ ಮುಖಂಡ ಕೆ.ಮಿಲನ್, ಮೇದ ಸಮಾಜ ಮುಖಂಡ ಎಂ.ಚಂದ್ರ, ಅರಮನೆ ಪಾಲೆ ಸಮಾಜ ಅಧ್ಯಕ್ಷ ಎ.ಮಂದಣ್ಣ ಪಾಲ್ಗೊಳ್ಳಲಿದ್ದಾರೆ.

ಸಾಧಕರಿಗೆ ಸನ್ಮಾನ
೧೮ ಸಮುದಾಯಗಳ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಹೆಗ್ಗಡೆ ಸಮಾಜದ ಕೊರಕುಟ್ಟಿರ ಸರಾ ಚಂಗಪ್ಪ, ಐರಿ ಸಮಾಜದ ಪೊನ್ನೀರ ವಾಸು ಉತ್ತಯ್ಯ, ಅಮ್ಮಕೊಡವ ಸಮಾಜದ ಹೆಮ್ಮೆಚ್ಚಿಮನೆ ವಿಠಲ, ಕೊಡವ ಸವಿತಾ ಸಮಾಜದ ಮುಡುವಂಡ ಆಶಿಕ್ ಉತ್ತಪ್ಪ, ಕೋಲೆಯ ಸಮಾಜದ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ, ಪಣಿಕ ಸಮಾಜದ ದೇವಮಕ್ಕಡ ಗಿಣಿ ಪೂಣಚ್ಚ, ಕಣಿಯ ಸಮಾಜದ ಚೇಂದುವಂಡ ಸಿ.ಪೂಣಚ್ಚ, ಬೂಣೆಪಟ್ಟಮ ಸಮಾಜದ ಜೋಕಿರ ಮುತ್ತಮ್ಮ, ಕೋಯವ ಸಮಾಜದ ಈರಮ್ಮಂಡ ದೇವಯ್ಯ, ಕುಡಿಯ ಸಮಾಜದ ಕುಡಿಯರ ಎಂ.ಕಾವೇರಪ್ಪ, ಬಣ್ಣ ಸಮಾಜದ ಬೀಕಚಂಡ ರಮೇಶ್ ಗಣಪತಿ, ಮಲೆಯ ಸಮಾಜದ ಮಲೆಯ ಸುರೇಶ್ ಸುಬ್ಬಯ್ಯ, ಕೊಡವ ಮಡಿವಾಳ ಸಮಾಜದ ಬಳಪಂಡ ಡಾಲಿ ತಮ್ಮಯ್ಯ, ಕಾಪಾಳ ಸಮಾಜದ ಕಾಪಾಳ ಗಿರೀಶ್ ದೇಜ, ಅರಮನೆ ಪಾಲೆ ಸಮಾಜದ ಮಂದಣ್ಣ, ಗೊಲ್ಲ ಸಮಾಜದ ಅರೆಯಂಡ ಸೋಮಣ್ಣ, ಮೇದ ಸಮಾಜದ ಮೇದರ ಚಿಣ್ಣಪ್ಪ ಅವರನ್ನು ಸನ್ಮಾನಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net