

ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿಯ ಮಾತು ನಂಬಿ ವ್ಯಕ್ತಿಯೊಬ್ಬರು 25 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಆತ್ರೇಯ ಆಚಾರ್ಯ ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ತುಷಾರ್ ಕಪೂರ್ ಎಂಬಾತ ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡಿದರೆ ಅತೀ ಲಾಭ ಬರುವ ಬಗ್ಗೆ ಆಸೆ ತೋರಿಸಿದ್ದು, ಅದರಂತೆ ವ್ಯಾಲೆಟ್ ಓಪನ್ ಮಾಡಿಸಿ, ಹಣ ಪಾವತಿಸುವಂತೆ ತಿಳಿಸಿದ್ದಾನೆ. ಇದನ್ನು ನಂಬಿದ ಆತ್ರೇಯ ಮಾ.19ರಿಂದ ಏ.9ರ ಮಧ್ಯವಧಿಯಲ್ಲಿ ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂಪಾಯಿ 25,52,300 ಹಣವನ್ನು ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿದ್ದಾರೆ. ಆ ಬಳಿಕ ಆತ್ರೇಯ ಅವರ ವ್ಯಾಲೇಟ್ನಲ್ಲಿದ್ದ ಬಿಟ್ ಕಾಯಿನ್ ಅನ್ನು ಆರೋಪಿ ತನ್ನ ಖಾತೆಗೆ ವರ್ಗಾವಣೆ ಮಾಡಿದ್ದು, ಹಣ ವಾಪಾಸು ನೀಡದೇ ಮೋಸ ಮಾಡಿದ್ದಾನೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.