ಜಾತಿ ಸಮೀಕ್ಷೆಯಲ್ಲಿ ಮೂಲ ಜಾತಿ ನಮೂದಿಸಿ

Published on

ತಿ.ನರಸೀಪುರ : ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ವೇಳೆ ಸಮುದಾಯಗಳ ಜನರು ತಮ್ಮ ತಮ್ಮ ಮೂಲ ಉಪಜಾತಿ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ ಮನವಿ ಮಾಡಿದ್ದಾರೆ. ಮೇ.5 ರಿಂದ ಪ. ಜಾತಿಗೆ ಸೇರಿದ ಸಮುದಾಯಗಳ ಗಣತಿ ಪ್ರಾರಂಭವಾಗಿದೆ. ಮೇ 17ರ ವರೆಗೆ ಸಮೀಕ್ಷೆದಾರರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. 3 ಹಂತದ ಸಮೀಕ್ಷೆ ಸಂದರ್ಭ ಮಾದಿಗ, ಕೊರಮ, ಕೊರಚ, ಲಂಬಾಣಿ ಮುಂತಾದ ಸಮುದಾಯದವರು ಮೂಲ ಜಾತಿ ಹೆಸರನ್ನು ಹಿಂಜರಿಕೆ ಇಲ್ಲದೇ ನೀಡಬೇಕು ಎಂದವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net