ಬಿಸಿಯೂಟ ತಯಾರಕರಿಗೆ ಇಡುಗಂಟು ನೀಡಿ

Hadagalari protst
ಹೂವಿನಹಡಗಲಿಯಲ್ಲಿ ಉಪತಹಸೀಲ್ದಾರ್ ಮಲ್ಲಿಕಾರ್ಜುನಗೆ ಬಿಸಿಯೂಟ ತಯಾರಕರ ಫೆಡರೇಷನ್ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷೆ ಎಚ್.ಅನಸೂಯ, ತಾಲೂಕು ಅಧ್ಯಕ್ಷೆ ಕವಿತಾ ಪಿ., ಉಪಾಧ್ಯಕ್ಷೆ ಲತಾ, ಎಐಟಿಯುಸಿ ರಾಜ್ಯ ಸದಸ್ಯ ಹಲಗಿ ಸುರೇಶ ಇತರರಿದ್ದರು.
Published on

ಹೂವಿನಹಡಗಲಿ: ಇಡುಗಂಟು ಜಾರಿ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಇಲ್ಲಿನ ತಾಪಂ ಆವರಣದಲ್ಲಿ ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಹಾಗೂ ಎಐಟಿಯುಸಿ ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು.

ಎಐಟಿಯುಸಿ ರಾಜ್ಯ ಸದಸ್ಯ ಹಲಗಿ ಸುರೇಶ ಮಾತನಾಡಿ, 22 ವರ್ಷಗಳಿಗಿಂತ ಹೆಚ್ಚು ಕಾಲ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಬಿಸಿಯೂಟ ತಯಾರಕರು ಅಲ್ಪ ವೇತನ ಪಡೆಯುತ್ತಿದ್ದಾರೆ. ಅವರು ವಯೋಸಹಜ ನಿವೃತ್ತಿಯಾದ ನಂತರ ಎರಡು ಲಕ್ಷ ರೂ. ಇಡುಗಂಟು ನೀಡಬೇಕೆಂದು ಹೋರಾಟ ನಡೆಸಲಾಗಿತ್ತು. ಆದರೆ, ಈವರೆಗೆ ಬೇಡಿಕೆ ಈಡೇರಿಲ್ಲ. ಶಾಲೆಗಳಲ್ಲಿ ಸಂಭವಿಸಿದ ಅವಘಡಗಳಲ್ಲಿ 12ಕ್ಕಿಂತ ಹೆಚ್ಚು ಬಿಸಿಯೂಟ ತಯಾರಕರು ಸಾವಿಗೀಡಾಗಿದ್ದಾರೆ. ಅವರನ್ನು ಅವಲಂಬಿಸಿದ ಕುಟುಂಬದ ಸದಸ್ಯರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷೆ ಎಚ್.ಅನಸೂಯ ಮಾತನಾಡಿ, ಬಿಸಿಯೂಟ ತಯಾರಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಕಳೆದ ಬಾರಿ ಬಿಜೆಪಿ ಸರ್ಕಾರ ಘೋಷಿಸಿದ್ದ ಹೆಚ್ಚುವರಿ ಒಂದು ಸಾವಿರ ರೂ. ನೀಡಬೇಕು ಎಂದರು.

ತಾಲೂಕು ಅಧ್ಯಕ್ಷೆ ಕವಿತಾ ಪಿ., ಉಪಾಧ್ಯಕ್ಷೆ ಲತಾ, ಪ್ರಧಾನ ಕಾರ್ಯದರ್ಶಿ ಸುನೀತಾ ಪಿ., ಖಜಾಂಚಿ ರೋಹಿಣಿ, ಕಿಸಾನ್ ಸಭಾ ತಾಲೂಕು ಅಧ್ಯಕ್ಷ ಮುಕುಂದಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net