ಸುಖ, ದು:ಖದಲ್ಲಿ ಸಮಭಾವ ಯುಗಾದಿ ಸಂದೇಶ

udp-14-sode sri bisu
Published on

ಉಡುಪಿ: ಸಾಮಾನ್ಯವಾಗಿ ಮನುಷ್ಯ ಸುಖವನ್ನೇ ಬಯಸುತ್ತಾನೆ. ಆದರೆ ಜೀವನದಲ್ಲಿ ಸುಖ ಮತ್ತು ದು@ಖ ಎರಡನ್ನೂ ಅನುಭವಿಸಬೇಕು. ಇದರಿಂದ ಸುಖದ ಮೌಲ್ಯ ತಿಳಿಯುತ್ತದೆ. ಈ ತತ್ವವನ್ನು ಅರಿತುಕೊಂಡು ಯುಗಾದಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.

ಪ್ರಾಚಿ ಫೌಂಡೇಶನ್​ ಮತ್ತು ಅದಮಾರು ಮಠದ ಆನಂದ ತುಳಸೀವನ ಟ್ರಸ್ಟ್​ ವತಿಯಿಂದ ಅದಮಾರು ಮಠದ ಆನಂದವನದಲ್ಲಿ ನಡೆದ ಬಿಸು ಸಂಭ್ರಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ತಿಂಗಳಿನಲ್ಲಿ ಹುಣ್ಣೆಮೆ ಮಾತ್ರ ಸಾಕು . ಅಮಾವಾಸ್ಯೆ ಬೇಡ ಎಂದರೆ ಚಂದ್ರನ ಬೆಳದಿಂಗಳ ಬೆಳಕಿನಲ್ಲಿ ಮರೆಯಾಗುವ ಲಾಂತರ ನಕ್ಷತ್ರಗಳು ನಮಗೆ ಗೋಚರಿಸುವುದಿಲ್ಲ. ಅದರಂತೆ ಸುಖ&ದು@ಖವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ಸಾಧನಾ ಶರೀರವನ್ನು ಕ್ಷುಲ್ಲಕ ವಿಚಾರಗಳಿಗೆ ವಿನಿಯೋಗಿಸದೆ ಅಧ್ಯಾತ್ಮಿಕ ದಾರಿಯಲ್ಲಿ ನಡೆಯಬೇಕು. ಸಂಸತಿಯನ್ನು ಪೋಷಿಸುವ ವ್ಯಕ್ತಿಗಳನ್ನು ಗುರುತಿಸಿ, ಗೌರವಿಸುವುದರಿಂದ ಕಲೆಯನ್ನು ಉತ್ತೇಜಿಸಿದಂತಾಗುತ್ತದೆ. ಸಾಧಕರನ್ನು ಮುನ್ನಲೆಗೆ ತರುವುದರಿಂದ ನಮ್ಮ ಪರಂಪರೆಯ ಶ್ರೀಮಂತಿಕೆ ಬೆಳಕಿಗೆ ಬರುತ್ತದೆ ಎಂದು ಶ್ರೀಗಳು ಹೇಳಿದರು.

ಇದೇ ಸಂದರ್ಭದಲ್ಲಿ ಹರಿಕಥಾ ಕೀರ್ತನೆಕಾರ ಪೊಳಲಿ ಜಗದೀಶ ದಾಸರು ಮತ್ತು ಕರಕುಶಲಕಾರ ಕಬ್ಬಿನಾಲೆಯ ಕಾಳಯ್ಯ ಆಚಾರ್ಯ ಅವರಿಗೆ ಯುಗಾದಿ ಪುರಸ್ಕಾರ ಪ್ರದಾನ ಮಾಡಿದರು.

ಅಮೂಲ್ಯ ಭಟ್​ ಪ್ರಾರ್ಥಿಸಿದರು., ಪ್ರಾಚಿ ಪೌಂಡೇಶನ್​ ಪ್ರವರ್ತಕ ಪುರುಷೋತ್ತಮ ಅಡ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್​ ಕೃಷ್ಣರಾಜ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ಪೊಳಲಿ ಜಗದೀಶ ದಾಸರಿಂದ ಭಕ್ತ ಸುಧಾಮ ಹರಿಕತೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net