ಅಧಿಕಾರಿಗಳ ರ್ನಿಲಕ್ಷ್ಯಕ್ಕೆ ಕಾಡೆಮ್ಮೆ ಬಲಿ

01_11_2025_BGR_RURAL_PAGE_2
Published on

ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಾಡೆಮ್ಮೆ ಸೆರೆಹಿಡಿದು ಕ್ರೇನ್​ ಮೂಲಕ ಕ್ವಾರಂಟೈನ್​ ಕೇಂದ್ರದತ್ತ ತೆಗೆದುಕೊಂಡು ಹೋಗುವ ವೇಳೆ ಮೃತಪಟ್ಟಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪ್ರಾಣಿ ವಿನಿಮಯ ಯೋಜನೆಯಡಿ ಹೈದರಾಬಾದಿನ ನೆಹರೂ ಜೈವಿಕ ಉದ್ಯಾನಕ್ಕೆ ಕಾಡೆಮ್ಮೆ ಕಳುಹಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಮುಂದಾಗಿದ್ದರು.

ಮೂರು ವರ್ಷದ ಹೆಣ್ಣು ಕಾಡೆಮ್ಮೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲೇ ಜನಿಸಿತ್ತು. ಅದಕ್ಕೆ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿದು, ಬಳಿಕ ಕ್ವಾರಂಟೈನ್​ ಕೇಂದ್ರದತ್ತ ತೆಗೆದುಕೊಂಡು ಹೋಗಲು ಮುಂದಾಗಿದ್ದ ವೇಳೆ ಕಾಡೆಮ್ಮೆ ದೇಹದ ಭಾಗಕ್ಕೆ ಸುತ್ತಿದ್ದ ಬೆಲ್ಟ್​ ಚುಚ್ಚಿ ಮೃತಪಟ್ಟಿದೆ. ಸುಮಾರು 10 ಗಂಟೆ ನಡೆದ ಕಾರ್ಯಾಚರಣೆಯಲ್ಲಿ ಪಶು ವೈದ್ಯಕಿಯ ಸಿಬ್ಬಂದಿ ಜತೆ ಇದ್ದರೂ ಈ ಅಚಾತುರ್ಯ ನಡೆದಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು.

ಇದೇ ಮೊದಲಲ್ಲ : ಈ ಹಿಂದೆ ಜಿರಾಫೆ ಕೂಡ ಮರದ ಕೊಂಬೆಗೆ ತಲೆ ಸಿಲುಕಿ ಪ್ರಾಣ ಕಳೆದುಕೊಂಡಿತ್ತು. ಈಗ ಸ್ವತ@ ಸಿಬ್ಬಂದಿಗಳೇ ಕಾಡೆಮ್ಮೆಯನ್ನು ನಿರ್ವಹಣೆ ಮಾಡುವಲ್ಲಿ ವಿಫಲರಾಗಿ ಸಾವಿಗೆ ಕಾರಣರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಕಾಡೆಮ್ಮೆಯನ್ನು ಸೆರೆ ಹಿಡಿದು ಕ್ವಾರಂಟೈನ್​ ಕೇಂದ್ರದತ್ತ ತೆಗೆದುಕೊಂಡು ಹೋಗುವ ವೇಳೆ ಅಚಾತುರ್ಯ ನಡೆದಿದೆ. ಮರಣೋತ್ತರ ಪರೀೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. > ಸೂರ್ಯ ಸೆರನ್​ ಕಾರ್ಯನಿರ್ವಹಣಾಧಿಕಾರಿ, ಬನ್ನೇರುಘಟ್ಟ ಜೈವಿಕ ಉದ್ಯಾನವನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net