

ಉಡುಪಿ : ಹಾವಂಜೆ ಗ್ರಾಮದ ಕೀಳಂಜೆಯ ನಾಟಿ ಮಾಡಿದ ಗದ್ದೆಯ ಪೈರನ್ನು ರಾತ್ರಿ ವೇಳೆ ತಿಂದು ತೇಗಿ ತೊಂದರೆ ಮಾಡುತ್ತಿರುವ ಕಾಡುಕೋಣೆ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ.
ರಾತ್ರಿ ವೇಳೆಯಲ್ಲಿ ಸಂಚರಿಸುವ ಈ ಕಾಡುಕೋಣೆಗಳು ಗದ್ದೆಗೆ ನುಗ್ಗಿ ಪೈರನ್ನು ತಿಂದು ಹಾಳು ಮಾಡುತ್ತವೆ ಇಲ್ಲಿಂದ ಕಾಡುಕೋಣೆಗಳನ್ನು ಹಿಡಿದು ಸೂಕ್ತ ಜಾಗಕ್ಕೆ ವರ್ಗಾವಣೆ ಮಾಡಬೇಕು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ರೈತರ ಫಸಲನ್ನು ಕಾಡುಕೋಣಗಳ ಹಾವಳಿಯಿಂದ ರಕ್ಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.