ಪೇಟೆಗೆ ಬಂದ ಕಾಡುಕೋಣ

kadukona
Published on

ಕಾರ್ಕಳ: ನಗರದ ಪೆರ್ವಾಜೆ ಪರಿಸರದಲ್ಲಿ ಮೂರು ಕಾಡುಕೋಣಗಳು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿವೆ.

ಶುಕ್ರವಾರ ಬೆಳಗ್ಗೆ ಏಕಾಏಕಿಯಾಗಿ ಮೂರು ಕಾಡುಕೋಣಗಳು ಪೆರ್ವಾಜೆ-ಬಂಡಿಮಠ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ದಾಟಿ ಹೋಗಿವೆ.

ದುರ್ಗ ಮಲೆಬೆಟ್ಟು ಪರಿಸರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಡುಕೋಣಗಳಿದ್ದು, ಆಗ್ಗಿಂದಾಗೆ ಅವುಗಳು ದಾರಿತಪ್ಪಿ ಜನವಸತಿ ಪ್ರದೇಶದಲ್ಲಿ ಕಾಣಸಿಗುತ್ತಿವೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ಕಾಡುಕೋಣಗಳು ಪ್ರತ್ಯಕ್ಷವಾಗಿದ್ದವು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿದ್ದು,ಮಾಹಿತಿ ಕಲೆ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net