ಕಾರಿಗೆ ಕಾಡುಕೋಣ ಡಿಕ್ಕಿ, ಪಾರಾದ ಎಎಸ್‌ಐ

kadukona
Published on

ಕಾಸರಗೋಡು: ರಸ್ತೆಗೆ ಅಡ್ಡ ಓಡಿದ ಕಾಡುಕೋಣ ಡಿಕ್ಕಿಯಾಗಿ ಕಾರು ಜಖಂಗೊಂಡಿದ್ದು, ಕಾರು ಚಲಾಯಿಸುತ್ತಿದ್ದ ಆದೂರು ಪೊಲೀಸ್ ಠಾಣೆ ಎಎಸ್‌ಐ ರಾಜನ್ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಶುಕ್ರವಾರ ನಸುಕಿಗೆ ಘಟನೆ ನಡೆದಿದೆ. ಬೆಂಗಳೂರಿನಿಂದ ಆಗಮಿಸಿದ ಪುತ್ರಿಯನ್ನು ಬೋವಿಕ್ಕಾನದ ಬಸ್ ನಿಲ್ದಾಣದಿಂದ ಕರೆತರಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಿಪ್ಲಿಕಯ ಎಂಬಲ್ಲಿ ಕಾರಿಗೆ ಕಾಡುಕೋಣ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಎದುರಿನ ಗಾಜು ಒಡೆದು, ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಪಲ್ಟಿಯಾಗದಿರುವುದರಿಂದ ಭಾರೀ ದುರಂತ ತಪ್ಪಿದೆ. ಚಿಪ್ಲಿಕಯ ಪ್ರದೇಶದಲ್ಲಿ ರಾತ್ರಿ ವೇಳೆ ವನ್ಯಮೃಗಗಳ ಹಾವಳಿ ಹೆಚ್ಚಾಗಿದ್ದು, ಈ ಹಿಂದೆ ಹಲವು ವಾಹನ ಅಪಘಾತಕ್ಕೀಡಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net