ಮತ್ತೆ ಮಂಗಳೂರು ನಗರ ನಡುವೆ ಕಾಡುಕೋಣ ಪ್ರತ್ಯಕ್ಷ

mng
ಕದ್ರಿ ಕಂಬಳ ಪ್ರದೇಶದಲ್ಲಿ ಕಾಡುಕೋಣ ಪತ್ತೆಯಾಗಿರುವ ಬಗ್ಗೆ ಲಭ್ಯ ಸಿಸಿಟಿವಿ ಚಿತ್ರ
Published on

ಮಂಗಳೂರು ವಿಜಯವಾಣಿ ಸುದ್ದಿಜಾಲ
ನಗರದಲ್ಲಿ ಕಾಡುಕೋಣ ಮತ್ತೆ ಪ್ರತ್ಯಕ್ಷವಾಗಿದೆ. ಕದ್ರಿ ಕಂಬಳ, ಕೈಬಟ್ಟಲು, ಸುತ್ತಮುತ್ತಲು ಪರಿಸರದಲ್ಲಿ ಭಾನುವಾರ ರಾತ್ರಿ ಕಾಡುಕೋಣ ಒಂಟಿ ಕೋಣ ಕಾಣಿಸಿಕೊಂಡಿದೆ.
ಕಾಡು ಕೋಣದ ಓಡಾಟ ಸಿಸಿ ನಗರದ ಕೆಲವೆಡೆ ಸಿಸಿ ಕ್ಯಾಮರದಲ್ಲ್ಲಿ ಸೆರೆಯಾಗಿದೆ.
ಕದ್ರಿ ಕೈಬಟ್ಟಲು ಪ್ರದೇಶದಲ್ಲಿ ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಓಡಾಡಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕದ್ರಿ ಜೋಗಿ ಮಠದ ಕೆಳಗೆ ಇರುವ 30 ಎಕರೆ ಜಾಗದ ತನಕ ಕಾಡುಕೋಣ ಓಡಾಡಿರುವುದಕ್ಕೆ ಕುರುಹು ದೊರೆತ್ತಿದೆ. ಬಳಿಕ ಅದು ಸೋಮವಾರ ಸಂಜೆಯ ತನಕವೂ ಎಲ್ಲಿಯೂ ಯಾರಿಗೂ ಕಾಣಿಸಿಕೊಂಡಿಲ್ಲ. ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಈ ಬಗ್ಗೆ ನಿರಂತರ ಗಮನವಿಟ್ಟಿದ್ದಾರೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಾಡುಕೋಣ ಮಂಗಳೂರು ನಗರ ಪ್ರವೇಶಿಸಿವುದು ಸಾಮಾನ್ಯವಾಗಿದೆ. ಸಾರ್ವಜನಿಕರಿಗೆ ಇಲ್ಲಿಯ ತನಕ ಮಂಗಳೂರಿನಲ್ಲಿ ಕಾಡುಕೋಣ ತೊಂದರೆ ಮಾಡಿಲ್ಲ. ಕಾಡುಕೋಣ ತಾನಾಗಿಯೇ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಆದರೆ ಅದಕ್ಕೆ ತೊಂದರೆ ಮಾಡಿದರೆ ಅದು ಭಯ ಬಿದ್ದು ಓಡುವಾಗ ಯಾರಿಗಾದರೂ ಸಮಸ್ಯೆಯಾಗಬಹುದು ಎಂದು ಅರಣ್ಯ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ.
ಕಳೆದ ವರ್ಷ ಕುಲಶೇಖರ ಡಾ.ರಚನ್ ಶೆಟ್ಟಿ ಅವರ ಮನೆಯ ತನಕ ಜೋಡಿ ಕಾಡುಕೋಣಗಳು ಬಂದಿದ್ದು, ಬಳಿಕ ಯಾರ ಕಣ್ಣಿಗೂ ಗೋಚರಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net