ಬಿಸಿಲೂರಿನಲ್ಲಿ ಮಲೆನಾಡಿನ ವಾತಾವರಣ

BLY-19-3
Published on

ಬಳ್ಳಾರಿ : ಬಿಸಿಲೂರು ಬಳ್ಳಾರಿ ಜಿಲ್ಲಾದ್ಯಂತ ಬುಧವಾರ ಜಿಟಿಜಿಟಿ ಮಳೆಯಾಗಿದ್ದು, ಎಲ್ಲೆಡೆ ಮಲೆನಾಡಿನ ವಾತಾವರಣ ಸೃಷ್ಠಿಗೊಂಡಿತ್ತು. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು.

ಬೆಳಗ್ಗೆ 11 ಗಂಟೆ ವೇಳೆಗೆ ವರುಣನ ಆಗಮನವಾಯಿತು. ಜಿಟಿಜಿಟಿ ಮಳೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಛತ್ರಿ ಹಿಡಿದುಕೊಂಡು ಸಾಗುತ್ತಿದ್ದ ದೃಶ್ಯಗಳು ಕಂಡು ಬಂದವು.

ಈಗಾಗಲೇ ಜಿಲ್ಲೆಯಲ್ಲಿ 1.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಕೃಷಿ ಚಟುವಟಿಕೆಗೆ ಪೂರಕವಾಗಿ ಮಳೆ ಆಗಿದ್ದರಿಂದ ರೈತರ ಮೊಗದಲ್ಲಿ ಸ್ವಲ್ಪ ಸಂತಸ ತಂದಿದೆ. ಜು.19ರಂದು ಜಿಲ್ಲೆಯಲ್ಲಿ ಸರಾಸರಿ 3.4 ಮಿ.ಮೀ. ಮಳೆಯಾಗಿದೆ. ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ 2.5 ಮಿ.ಮೀ, ಸಂಡೂರು 2.6, ಸಿರಗುಪ್ಪ 1.9, ಕುರುಗೋಡು 1.1, ಕಂಪ್ಲಿ 1.0 ಮಿ.ಮೀ. ಮಳೆಯಾಗಿದೆ.

ಸಂಡೂರು ತಾಲೂಕು ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಒಂದು ಮನೆ ಕುಸಿದಿದೆ. ಒಟ್ಟಾರೆ ಮಳೆ ಆಗಮನದಿಂದಾಗಿ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net