ಬಿಸಿಯೂಟ ಶುಚಿಯಾಗಿರಲಿ

Published on

ಢವಳಗಿ: ಸಮೀಪದ ರೂಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣೆ ಮಾತ್ರೆ ವಿತರಿಸಲಾಯಿತು. ಅಕ್ಷರ ದಾಸೋಹ ಅಧಿಕಾರಿ ಎಂ.ಎಂ.ಬೆಳಗಲ್ ಅವರು, ಮಕ್ಕಳ ಕಲಿಕೆ, ಬಿಸಿಯೂಟದ ನಿರ್ವಹಣೆ ಹಾಗೂ ಪೌಷ್ಟಿಕ ಆಹಾರದ ವಿತರಣೆ ಕುರಿತು ಪರಿಶೀಲಿಸಿದರು. ಅಡುಗೆ ಸಿಬ್ಬಂದಿ ಆಹಾರ ತಯಾರಿಸುವ ಎಲ್ಲ ಪಾತ್ರೆ, ಸಾಮಗ್ರಿಗಳನ್ನು ಸ್ವಚ್ಛ ಮಾಡಿಕೊಂಡು ಒಂದೆರಡು ಬಾರಿ ತೊಳೆಯಬೇಕು ಎಂದು ಸೂಚಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಮುತ್ತಕ್ಕ ದೊಡಮನಿ, ಸಿಎಚ್‌ಒ ಗುರು ಮಾದರ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಪ್ರಭಾರಿ ಮುಖ್ಯಗುರು ಶಿವಾನಂದ ಬೇಲಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net