

ಬ್ಯಾಡಗಿ: ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಜರುಗಿದೆ.
ಮೃತನನ್ನು ಕುರುವತ್ತೆಪ್ಪ ಪುಟ್ಟಪ್ಪ ಪೂಜಾರ (56) ಎಂದು ತಿಳಿದುಬಂದಿದೆ. ಇವರಿಗೆ 1.14 ಗುಂಟೆ ಕೃಷಿ ಜಮೀನಿದ್ದು, ಬ್ಯಾಡಗಿಯ ಕೆವಿಜಿ ಬ್ಯಾಂಕ್ನಲ್ಲಿ 1.20 ಲಕ್ಷ ರೂ ಹಾಗೂ ಪಿಎಲ್ಡಿ ಬ್ಯಾಂಕ್ನಲ್ಲಿ 1 ಲಕ್ಷ ಹಾಗೂ ಸಹಕಾರಿ ಸಂಘದಲ್ಲಿ 60 ಸಾ.ರೂ. ಸಾಲವಿದೆ. 4 ವರ್ಷಗಳಿಂದ ಬಿತ್ತಿದ ಬೆಳೆ ಬಾರದೆ ಬೇಸರಗೊಂಡಿದ್ದ ರೈತ ತೀವ್ರ ಸಾಲದಲ್ಲಿ ಸಿಲುಕಿದ್ದರು. ಇದೇ ನೋವಿನಲ್ಲಿ ಭಾನುವಾರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.