ನಕಲಿ ಐಎಸ್​ಐ ಗುರುತಿನ ನೀರಿನ ಬಾಟಲಿ ವಶ

h21-BIS bagalkote
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಭಾರತೀಯ ಮಾನಕ ಸಂಸ್ಥೆಯ (ಬಿಐಎಸ್) ಹುಬ್ಬಳ್ಳಿ ಕಚೇರಿಯ ಅಧಿಕಾರಿಗಳು ಬಾಗಲಕೋಟೆಯಲ್ಲಿ ಗುರುವಾರ ದಾಳಿ ಕಾರ್ಯಾಚರಣೆ ನಡೆಸಿ, ನಕಲಿ ಐಎಸ್​ಐ ಗುರುತಿನ ಅಪಾರ ಪ್ರಮಾಣದ ಕುಡಿಯುವ ನೀರಿನ ಪೌಚ್ ಹಾಗೂ ಪೆಟ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಗಲಕೋಟೆ ವಿದ್ಯಾಗಿರಿಯ ಮೆ. ಎಚ್2ಒ ಇಂಡಸ್ಟ್ರೀಸ್ ಮೇಲೆ ಕಾರ್ಯಾಚರಣೆ ನಡೆಸಿದ ವೇಳೆ ಅಕ್ವಾ ಸ್ಮೂತ್ ಹೆಸರಿನ 200ಎಂಎಲ್ ಪೌಚ್, 500ಎಂಎಲ್, 1,000 ಎಂಎಲ್ ಹಾಗೂ 2,000 ಎಂಎಲ್ ಪೆಟ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೆ. ಎಚ್2ಒ ಇಂಡಸ್ಟ್ರಿಸ್​ನವರು ಭಾರತೀಯ ಮಾನಕ ಸಂಸ್ಥೆಯಿಂದ ಐಎಸ್​ಐ ಗುರುತಿಗೆ ಲೈಸನ್ಸ್ ಪಡೆದಿರಲಿಲ್ಲ. ಆದರೂ ಉತ್ಪನ್ನಗಳ ಮೇಲೆ ಐಎಸ್​ಐ ಗುರುತು ಬಳಸಿದ್ದರು. ಉದ್ಯಮದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಡಿ.ಪಿ. ಕುಮಾರ ತಿಳಿಸಿದ್ದಾರೆ.

ಉಪ ನಿರ್ದೇಶಕ ಎಂ. ಪ್ರದೀಪ ಕುಮಾರ್, ಸಹಾಯಕ ನಿರ್ದೇಶಕ ಆಶುತೋಷ ಅಗರ್ವಾಲ್, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net