

ಬೆಂಗಳೂರು: ವಿಶ್ವ ಗುಣಮಟ್ಟ ದಿನ ನಿಮಿತ್ತ ಭಾರತೀಯ ಮಾನಕ ಬ್ಯುರೋ (ಬಿಐಎಸ್) ಬೆಂಗಳೂರು ಘಟಕ, ಶುಕ್ರವಾರ ನಗರದ ಖಾಸಗಿ ಹೋಟೆಲ್ನಲ್ಲಿ "ಉತ್ತಮ ಪ್ರಯೋಗಾಲಯ ಅಭ್ಯಾಸಗಳು' ಹಾಗೂ "ತಾಂತ್ರಿಕ ಕಾರ್ಯಾಗಾರ' ಕಾರ್ಯಕ್ರಮ ಆಯೋಜಿಸಿತ್ತು.
ಬಿಐಎಸ್ ಬೆಂಗಳೂರು ಘಟಕ ನಿರ್ದೇಶಕ ಕೆ. ವಿಜಯವೀರನ್ ಮಾತನಾಡಿ, ಸಾರ್ವಜನಿಕರಿಗೆ ಗುಣಮಟ್ಟದ ಉತ್ಪನ್ನಗಳ ಒದಗಿಸುವ ನಿಟ್ಟಿನಲ್ಲಿ ಬಿಐಎಸ್ ಕಾಯೋರ್ನ್ಮುಖವಾಗಿದೆ. ಪ್ರಯೋಗಾಲಯಗಳ ನಾವೀನ್ಯತೆಯಿಂದ ಪರಿಣಾಮಕಾರಿಯಾಗಿ ಕಲಬೆರಕೆ ತಡೆಗಟ್ಟಬಹುದು ಎಂದರು.
ಬಿಐಎಸ್ ಪರವಾನಗಿ ಪಡೆದು ತಯಾರಿಸುವ, ಪ್ಯಾಕಿಂಗ್ ಮೇಲೆ ಐಎಸ್ಐ ಗುರುತು ಇರುವ ಉತ್ಪನ್ನಗಳ ಖರೀದಿಸಬೇಕು. ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಾಗಣೆ, ಮಾರಾಟ ಹಂತಗಳಲ್ಲಿ ಸುರಕ್ಷತೆ ಕಾಪಾಡಬೇಕು. ರಾಸಾಯನಿಕ, ಕಲಬೆರಕೆ ವಸ್ತುಗಳನ್ನು ಖರೀದಿಸದಂತೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಗ್ರೂಪ್ ಕ್ಯಾಪ್ಟನ್ ಕಮಾಂಡಿಂಗ್ ಆಫೀಸರ್ ಸಂತೋಷ್ ಕೆ. ವಯಕೋಡನ್ ಮಾತನಾಡಿ, ಗುಣಮಟ್ಟದ ಆಹಾರ ಒದಗಿಸುವುದು ಆಹಾರ ಉದ್ದಿಮೆಗಳ ಕರ್ತವ್ಯ. ಕಲಬೆರಕೆ ಆಹಾರ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಗುಣಮಟ್ಟ ಆಹಾರ ಒದಗಿಸುವಲ್ಲಿ ಬಿಐಎಸ್ ಪ್ರಮುಖ ಪಾತ್ರವಹಿಸಿದೆ ಎಂದರು.
ಪ್ರಯೋಗಾಲಯದಲ್ಲಿ ಮಾನದಂಡಗಳ ತಯಾರಿಕೆ, ಅನುಷ್ಠಾನ, ನಿಯಮಿತ ಪರೀೆ ಕುರಿತು ವಿಜ್ಞಾನಿ ಟಿ.ನಾಗಮಣಿ ಮಾತನಾಡಿದರು. ಕೃತಕ ಬುದ್ದಿಮತ್ತೆ (ಎಐ) ಪಾತ್ರ ಕುರಿತು ತಜ್ಞರು ಬೆಳಕು ಚೆಲ್ಲಿದರು. ಪ್ರಾಧ್ಯಾಪಕರು, ವಿಜ್ಞಾನಿಗಳು, ಇಂಜಿನಿಯರ್ಗಳು ಭಾಗವಹಿಸಿದ್ದರು.