ಬಿಐಎಸ್ ಅಧಿಕಾರಿಗಳಿಂದ 10 ಸಾವಿರ ನೀರಿನ ಪೌಚ್ ವಶ

BIS
Published on

ಹುಬ್ಬಳ್ಳಿ: ಭಾರತೀಯ ಮಾನಕ ಸಂಸ್ಥೆ (ಬಿಐಎಸ್)ಯ ಹುಬ್ಬಳ್ಳಿ ಶಾಖೆಯ ಅಧಿಕಾರಿಗಳು ಬಳ್ಳಾರಿಯಲ್ಲಿ ಶುಕ್ರವಾರ ದಾಳಿ ಕಾರ್ಯಾಚರಣೆ ನಡೆಸಿ ನಕಲಿ ಐಎಸ್​ಐ ಮಾರ್ಕ್ ಬಳಸಿದ ಪ್ಯಾಕ್ ಮಾಡಲಾದ ಕುಡಿಯುವ ನೀರಿನ 200ಎಂ.ಎಲ್. ಗಾತ್ರದ 10 ಸಾವಿರ ಪೌಚ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಳ್ಳಾರಿಯ ತೋರಣಗಲ್ ಗ್ರಾಮದ ಮೆ. ಗುರುಕೃಪಪಾ ಇಂಡಸ್ಟ್ರೀಸ್​ನ ಮೇಲೆ ದಾಳಿ ಕಾರ್ಯಾಚರಣೆ ನಡೆಸಲಾಗಿದೆ. ಇಲ್ಲಿ ಎಸ್​ಕೆಜಿ ಅಕ್ವಾ ಬ್ರ್ಯಾಂಡ್​ನಡಿ ಪ್ಯಾಕ್ ಮಾಡಲಾದ ಕುಡಿಯುವ ನೀರಿನ ಪೌಚ್​ಗಳನ್ನು ಇದ್ದವು. ಆದರೆ, ಐಎಸ್​ಐ ಮಾರ್ಕ್ ಬಳಸಲು ಬಿಐಎಸ್ ಕಚೇರಿಯಿಂದ ಪ್ರಮಾಣಪತ್ರ ಪಡೆದಿರಲಿಲ್ಲ.

ಮೆ. ಗುರುಕೃಪಾ ಇಂಡಿಸ್ಟ್ರೀಸ್ ಬಿಐಎಸ್ ಕಾಯ್ದೆ-2016 ಅನ್ನು ಉಲ್ಲಂಘಿಸಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮ ಜರುಗಿಸಲಾಗುವುದು ಎಂದು ಬಿಐಎಸ್ ಹುಬ್ಬಳ್ಳಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net