ಗುಣಮಟ್ಟದ ವಿದ್ಯುತ್ ಉಪಕರಣ ಬಳಕೆ,  ಬಿಐಎಸ್ ನಿಂದ ಹೆಸ್ಕಾಂ ಅಧಿಕಾರಿಗಳಿಗೆ ಅರಿವು ಕಾರ್ಯಕ್ರಮ

IMG_20250620_210643_685.jpg
Published on

ಹುಬ್ಬಳ್ಳಿ: ಇಲ್ಲಿಯ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ವತಿಯಿಂದ ಹೆಸ್ಕಾಂ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಅಧಿಕಾರಿಗಳಿಗೆ ಅರಿವು ಮೂಡಿಸಲು ಸಂವೇದನಾಶೀಲತೆ ಕಾರ್ಯಕ್ರಮ (ಸೆನ್ಸಿಟೈಜೇಶನ್ ಪ್ರೋಗ್ರಾಂ) ಏರ್ಪಡಿಸಲಾಗಿತ್ತು.

ಹೆಸ್ಕಾಂನ ವಿವಿಧ ವಿಭಾಗಗಳ 330 ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಹಲವು ಸಲಹೆ ಸೂಚನೆಗಳನ್ನು ಪಡೆದುಕೊಂಡರು.

ಹುಬ್ಬಳ್ಳಿ ಬಿಐಎಸ್ ಶಾಖೆ ನಿರ್ದೇಶಕ ಪಿ.ಎನ್. ಮುರಳಿ ಮಾತನಾಡಿ, ಇಂಧನ ಕ್ಷೇತ್ರದಲ್ಲಿ ಬಿಐಎಸ್ ಗುರುತಿನ ಉಪಕರಣಗಳ ಬಳಕೆ ಬಹಳಷ್ಟು ಅಗತ್ಯವಿದೆ. ಈ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಬಿಐಎಸ್ ಪ್ರಧಾನ ಉಪನಿರ್ದೇಶಕ ಹಾಗೂ ವಿಜ್ಞಾನಿ ಪ್ರವಿಣ ಖನ್ನಾ ಮಾತನಾಡಿ, ಗುಣಮಟ್ಟ ಕಾಯ್ದುಕೊಳ್ಳುವುದು ಹಾಗೂ ಸುರಕ್ಷತೆ, ಸಾಮರ್ಥ್ಯ ಮುಂತಾದ ಅಂಶಗಳ ಪಾಲನೆ ಹಿನ್ನೆಲೆಯಲ್ಲಿ ಬಿಐಎಸ್ ಹಾಗೂ ವಿದ್ಯುತ್ ವಿತರಣೆ ಕಂಪನಿಗಳು ಮಧ್ಯ ಸಮನ್ವಯತೆ ಬಹು ಮುಖ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹೆಸ್ಕಾಂ ಎಂಡಿ ವೈಶಾಲಿ ಎಂ.ಎಲ್. ಮಾತನಾಡಿ, ತಾಂತ್ರಿಕತೆಯಲ್ಲಿ ಗುಣಮಟ್ಟದ ಬಗ್ಗೆ ಮಾಹಿತಿ ಬಿಐಎಸ್ ನವರು ನೀಡಿರುವುದು ಪ್ರಸ್ತುತವಾಗಿದೆ. ಈ ಬಗ್ಗೆ ಅಧಿಕಾರಿಗಳು ಜಾಗೃತ ರಾಗಬೇಕು. ಕಾರ್ಯಕ್ರಮದಿಂದ ಹಲವು ತಾಂತ್ರಿಕ ವಿಷಯಗಳು ಅಧಿಕಾರಿಗಳಿಗೆ ಮನವರಿಕೆಯಾದವು ಎಂದರು.

ಹಿರಿಯ ಅಧಿಕಾರಿಗಳಾದ ರಿತ್ವಿಕ್ ಆನಂದ, ತುಷಾರ್ ಶರ್ಮಾ, ಪ್ರದಿಪ ಕುಮಾರ ಇತರರು ಮಾಹಿತಿ ನೀಡಿದರು.
ವಿದ್ಯುತ್ ಉಪಕರಣಗಳ ಬಳಕೆ ಸಂದರ್ಭದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವ ಬಗ್ಗೆ ತಿಳಿಸಿಕೊಡಲಾಯಿತು.

ಮಾನಕ ಗೀತೆ ಪ್ರಸ್ತುತ ಪಡಿಸಲಾಯಿತು. ತಾಂತ್ರಿಕ ನಿರ್ದೇಶಕ ಎಸ್. ಜಗದೀಶ, ಹಣಕಾಸು ವಿಭಾಗದ ನಿರ್ದೇಶಕ ಪ್ರಕಾಶ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net