ಬೀರೂರು ಶ್ರೀ ಏಳುಕೋಟಿ ಗಣಪತಿ ವಿಸರ್ಜನೆ

BIRUR ff
ಬೀರೂರಿನ ಸರಸ್ವತಿಪುರಂ ಬಡಾವಣೆ ಅಂಬೇಡ್ಕರ್ ಭವನದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಏಳುಕೋಟಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಮಲ್ಲಿಕಾರ್ಜುನ್, ರಮೇಶ, ಸಾಗರ, ಮನು, ನಂದನ್ ಇತರರಿದ್ದರು.
Published on

ಬೀರೂರು: ಪಟ್ಟಣದ ಸರಸ್ವತಿಪುರಂ ಬಡಾವಣೆ ಅಂಬೇಡ್ಕರ್ ಭವನದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಏಳುಕೋಟಿ ಗಣಪತಿಯನ್ನು ಸೋಮವಾರ ಅದ್ದೂರಿ ಮೆರವಣಿಗೆ ನಡೆಸಿ ಬಾಕಿನಕೆರೆಯಲ್ಲಿ ವಿಸರ್ಜಿಸಲಾಯಿತು.

14 ದಿನಗಳಿಂದ ಪ್ರತಿನಿತ್ಯ ಪೂಜೆ, ಗಣ ಹೋಮ, ವಿಶೇಷ ಅಲಂಕಾರ, ಭಜನೆ, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶನಿವಾರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಸೋಮವಾರ ಯುವಕರು ಬೃಹತ್ ಹೂವಿನ ಮಾಲೆಯನ್ನು ಗಣಪತಿಗೆ ಸಮರ್ಪಿಸಿದರು. ಮಂಗಳವಾದ್ಯಗೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಮಹಾತ್ಮಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಲಾಯಿತು. ನಂತರ ಬಾಕಿನಕೆರೆಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಡಿಜೆ ಶಬ್ದಕ್ಕೆ ಜನರು ಕುಣಿದು ಸಂಭ್ರಮಿಸಿದರು. ಅರ್ಚಕರಾದ ವಿಜೇತ್, ದಶರಥ, ಮಲ್ಲಿಕಾರ್ಜುನ್, ರಮೇಶ, ಧನಂಜಯ, ಸಾಗರ, ನಿತಿನ್, ದರ್ಶನ್, ಮನು, ನಂದನ್, ಶಂಕರ್, ಸುನಿಲ್, ಶಿವನಾಗ, ಶಿವು, ಬಿ.ಸಿ.ನಂದನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net