ಸುಗ್ಗಿ ಸುಧಾಕರ ಶೆಟ್ಟಿ ಜನ್ಮದಿನಾಚರಣೆ

h17-suggi
Published on

ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಬಂಟರ ಸಂಘದ ಅಧ್ಯಕ್ಷ, ಹೋಟೆಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಅವರ ಐವತ್ತೇಳನೇ ವರ್ಷದ ಜನ್ಮದಿನವನ್ನು ಸೋಮವಾರ ನಗರದಲ್ಲಿ ಆಚರಿಸಲಾಯಿತು.

ಸ್ಪಂದನ ದಿವ್ಯಾಂಗ ದೇವರ ಮಕ್ಕಳು ಹಾಗೂ ಮಮತೆಯ ತೊಟ್ಟಿಲು ಎಂಬ ಅನಾಥ ಮಕ್ಕಳ ಆಶ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಸುಗ್ಗಿ ಸುಧಾಕರ ಶೆಟ್ಟಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಂತರ ಮಕ್ಕಳ ಜತೆ ಕುಳಿತು ಊಟ ಮಾಡಿದ್ದಲ್ಲದೇ ಬಹುತೇಕ ಸಮಯವನ್ನು ಅವರ ಜತೆ ಕಳೆದರು. ಈ ವೇಳೆ ಸುಗ್ಗಿ ಸುಧಾಕರ ಶೆಟ್ಟಿ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net