ಜನ್ಮದಿನ ಸರಳವಾಗಿ ಆಚರಿಸಲು ಮಹಾಂತೇಶ ಕವಟಗಿಮಠ ನಿರ್ಧಾರ

4545
Published on

ಬೆಳಗಾವಿ: ಮಹಾಮಾರಿ ಕರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಹೀಗಾಗಿ ಜ. 16ರಂದು ತಮ್ಮ ಜನ್ಮದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ.ಕೋವಿಡ್-19 ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೂವು, ಗುಚ್ಛ ನೀಡುವುದು ಸುರಕ್ಷಿತವಲ್ಲ.

ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳು ಹಾಗೂ ಕಾರ್ಯಕರ್ತರು ಖುದ್ದಾಗಿ ಆಗಮಿಸುವ ಅಗತ್ಯವಿಲ್ಲ. ತಾವು ಇದ್ದ ಸ್ಥಳದಿಂದಲೇ ಶುಭಾಶಯ ಕೋರಿದರೆ ಸಾಕು ಎಂದು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net