ವಿವಿಧೆಡೆ ರಾಯರ ವರ್ಧಂತಿ ಮಹೋತ್ಸವ

Birthday celebrations of the king in various places
ವಿಜಯಪುರದ ನಂಜನಗೂಡು ಶ್ರೀ ರಾವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ 430ನೇ ವರ್ಧಂತಿ ಉತ್ಸವದ ಅಂಗವಾಗಿ ರಥೋತ್ಸವ ಜರುಗಿತು.
Published on

ವಿಜಯಪುರ: ಇಲ್ಲಿನ ನಂಜನಗೂಡು ಶ್ರೀ ರಾವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಶ್ರೀ ರಾವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ ಅತ್ಯಂತ ಭಕ್ತಿ ಶ್ರದ್ಧೆಯಿಂದ ನಡೆಯಿತು.

ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ರಥೋತ್ಸವ, ಕನಕಸೇವೆ ಜರುಗಿದವು. ಅಲಂಕೃತ ರಥದಲ್ಲಿ ಪ್ರಹ್ಲಾದರಾಜರ ಪ್ರತಿಮೆ ಕಂಗೊಳಿಸಿತು. ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಅರ್ಚಕರಾದ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯರು ಪೂಜೆ ಸಲ್ಲಿಸಿದರು.

ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಜ್ಞಾನುಸಾರ ಶ್ರೀ ಮಠದಲ್ಲಿ ಏಳು ದಿನ ಹುಬ್ಬಳ್ಳಿಯ ಡಾ.ಕಂಠಪಲ್ಲಿ ಸಮೀರ ಆಚಾರ್ಯರಿಂದ ಪ್ರವಚನ ನಡೆಯಿತು.

ಪ್ರವಚನ ನೀಡಿದ ಆಚಾರ್ಯರನ್ನು ಶ್ರೀಮಠದ ಪರವಾಗಿ ಗೌರವಿಸಿ ಮಾತನಾಡಿದ ಶ್ರೀಮಠದ ವಿಚಾರಣಾಕರ್ತ ಗೋಪಾಲ ನಾಯಕ, ನವಭಕ್ತಿಗಿಂತ ಶ್ರವಣ ಭಕ್ತಿ ಶ್ರೇಷ್ಠವಾದುದು. ಅದರಂತೆ ಏಳು ದಿನ ನಡೆದ ಪ್ರವಚನ ಸಪ್ತಾಹಕ್ಕೆ ಭಕ್ತರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಪ್ರವಚನ ಸಪ್ತಾಹದ ಸೇವೆಗೈದ ಹುಬ್ಬಳ್ಳಿಯ ಆನಂದರಾವ ನಾಯಕ ದಂಪತಿ ಆಚಾರ್ಯರಿಗೆ ಗುರುಕಾಣಿಕೆ ನೀಡಿ ಗೌರವಿಸಲಾಯಿತು. ದೇವರಹಿಪ್ಪರಗಿಯ ಗುರುರಾಜ ಕುಲಕರ್ಣಿ ಕುಟುಂಬ ವರ್ಧಂತಿ ಉತ್ಸವದ ಸೇವೆಗೈದರು.

ವಾಮನರಾವ ದೇಶಪಾಂಡೆ, ಕೃಷ್ಣ ಬೀಡಕರ, ವಿಜಯೀಂದ್ರ ಜೋಶಿ, ಶ್ರೀಕೃಷ್ಣ ಪಡಗಾನೂರ, ಪ್ರಕಾಶ ಬಿಜಾಪುರ, ಬಿ.ಜಿ. ಜೋಶಿ, ಶ್ರೀಧರ ಹರಿದಾಸ, ಬಂಡಾಚಾರ್ಯ ಜೋಶಿ, ಶ್ರೀಧರ ಜೋಶಿ (ಮುತ್ತಗಿ), ಭೀಮಣ್ಣ ಕುಲಕರ್ಣಿ, ಬಿ.ಬಿ. ಕುಲಕರ್ಣಿ, ಡಿ.ಆರ್​. ನಾಡಿಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net