

ಕೂಡ್ಲಿಗಿ: ನಾಡು ಕಂಡಂತಹ ಅಪ್ರತಿಮ ನಾಯಕ ನಟ ದಿ.ಪುನೀತ್ ರಾಜಕುಮಾರ್ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಪಾದಗಟ್ಟೆ ವೃತ್ತದಲ್ಲಿನ ಪುನೀತ್ ಪುತ್ಥಳಿ ಬಳಿ ಅಪ್ಪು ಹುಟ್ಟುಹಬ್ಬ ಅಂಗವಾಗಿ ಪುನೀತ್ ಅಭಿಮಾನಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದರು. ತನ್ನ ತಂದೆಯಂತೆಯೇ ಕಲಾವಿದರಾಗಿ ನಾಡಿಗೆ ಅಮೂಲ್ಯ ಚಿತ್ರಗಳನ್ನು ನೀಡಿ ಕಲಾರಸಿಕರನ್ನು ಮೋಡಿ ಮಾಡಿದ ಕೀರ್ತಿ ಅಪ್ಪುಗೆ ಸಲ್ಲುತ್ತದೆ. ಗಾಯನ, ನೃತ್ಯ, ಸಾಹಸ ಹೀಗೆ ಎಲ್ಲ ಅಭಿನಯವನ್ನು ಲೀಲಾಜಾಲವಾಗಿ ಮಾಡುತ್ತಿದ್ದ ಪುನೀತ್ ಇಲ್ಲದೆ ಕನ್ನಡ ಚಿತ್ರರಂಗ ಬಡವಾಗಿದೆ. ಅವರ ನೆನವು ಅಭಿಮಾನಿಗಳ ಅಂತರಾಳದಲ್ಲಿ ಅಚ್ಚಳಿಯದೆ ಉಳಿದಿದೆ. ಸಮಾಜ ಮತ್ತು ಕಲಾ ಸೇವೆಯಲ್ಲಿ ಅವರು ಇತಿಹಾಸ ಸೃಷ್ಟಿಸಿದ್ದಾರೆ ಎಂದರು.
ಪಪಂ ಅಧ್ಯಕ್ಷೆ ಎಂ.ಶಾರದಾಬಾಯಿ, ಉಪಾಧ್ಯಕ್ಷೆ ರೇಣುಕಾ ದುರುಗೇಶ್, ಸದಸ್ಯರಾದ ಪಿ. ಚಂದ್ರು, ಕೆ.ಈಶಪ್ಪ, ಕೆ.ಎಚ್.ವೀರನಗೌಡ, ಕೆ.ಎಂ. ತಿಪ್ಪೇಸ್ವಾಮಿ, ಎಸ್.ಸುರೇಶ್, ಎಸ್.ದುರುಗೇಶ್, ಪುನೀತ್ ಅಭಿಮಾನಿಗಳಾದ ಅಜೇಯ್, ರಮೇಶ್, ಸುನೀಲ್, ಉಗ್ರಂ ಕಿಟ್ಟಿ, ಪುಟ್ನಂಜ, ಸೊಲ್ಲೇಶ್, ನಾಗರಾಜ್, ಹುಲಿಕುಂಟಿ ಇತರರಿದ್ದರು.