

ಮದ್ದೂರು: ಪಟ್ಟಣದ ಭೂ ಬ್ಯಾಂಕ್ ಸಂಸ್ಥಾಪಕ ಹಾಗೂ ಮಾಜಿ ಶಾಸಕ ದಿ.ಮಂಜೇಗೌಡ ಅವರ 100 ನೇ ವರ್ಷದ ಜನ್ಮದಿನವನ್ನು ಬ್ಯಾಂಕ್‌ನ ಕುವೆಂಪು ಸಭಾಂಗಣದಲ್ಲಿ ಆಡಳಿತ ಮಂಡಳಿಯಿಂದ ಬುಧವಾರ ಆಚರಿಸಲಾಯಿತು.
ಬ್ಯಾಂಕ್‌ನ ಅಧ್ಯಕ್ಷ ಕೆ.ಬಿ.ಸಿದ್ದೇಗೌಡ ಮಾತನಾಡಿ, ಮಂಜೇಗೌಡರ ದೂರದೃಷ್ಟಿ ಫಲವಾಗಿ ಪಟ್ಟಣದಲ್ಲಿ ಪಿ ಕಾರ್ಡ್ ಬ್ಯಾಂಕ್ ಆರಂಭವಾಗಿ ತಾಲೂಕಿನ ಲಕ್ಷಾಂತರ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಬ್ಯಾಂಕ್‌ನ ಪ್ರಭಾರ ವ್ಯವಸ್ಥಾಪಕಿಯಾಗಿ ಕರ್ತವ್ಯ ಸಲ್ಲಿಸಿ ನಿವೃತ್ತಿಯಾದ ಎಂ.ಸಿ.ಭಾಗ್ಯಮ್ಮ ಅವರಿಗೆ ಬ್ಯಾಂಕ್ ಆಡಳಿತ ಮಂಡಳಿಯಿಂದ ಅಭಿನಂದಿಸಿ, ಬೀಳ್ಕೊಡಲಾಯಿತು.
ಬ್ಯಾಂಕ್‌ನ ಉಪಾಧ್ಯಕ್ಷ ಕೃಷ್ಣಪ್ಪ, ನಿರ್ದೇಶಕರಾದ ಸಿದ್ದಮರಿಗೌಡ, ಸವಿತಾ ಬೊರೇಗೌಡ, ಬಿ.ಎಸ್.ಮಧು, ಮುತ್ತುರಾಜು, ಸಿದ್ದರಾಮು, ರಾಜಶೇಖರ್, ಮಹದೇವಪ್ಪ, ಗೌರಮ್ಮ, ಈರೇಗೌಡ, ಕೆಂಪೇಗೌಡ, ಕೃಷ್ಣೇಗೌಡ, ಸಣ್ಣಮರಿನಾಯಕ್ ಇತರರು ಇದ್ದರು.